

ಬೆಳ್ತಂಗಡಿ: ಅಗ್ನಿ ಕೆಮ್ಮಟೆ ಇದರ ಸಹಭಾಗಿತ್ವದಲ್ಲಿ ಗೌತಮ್ ಪ್ರಭು ಟ್ರೋಫಿ 2024 ಕಿಕ್ರೆಟ್ ಪಂದ್ಯಾಟ ಜ.27 ರಂದು ನಡೆಯಿತು.
ಅಧ್ಯಕ್ಷತೆಯನ್ನು ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ ನೆರೆವೇರಿಸಿದರು.ಉದ್ಘಾಟನೆಯನ್ನು ಸ.ಹಿ.ಪ್ರಾ.ಶಾಲೆ ಕೆಮ್ಮಟೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬೂಬಕ್ಕರ್ ನೆರೆವೇರಿಸಿದರು.
ಗೌರವ ಉಪಸ್ಥಿತಿಯಾಗಿ ಕೆಮ್ಮಟೆ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಪ್ರೀತಿ ಕುಮಾರಿ, ಪುದುವೆಟ್ಟು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪೂರ್ಣಕ್ಷ, ಪುದುವೆಟ್ಟು ಗ್ರಾಮ ಪಂಚಾಯತ್ ನ ಸದಸ್ಯರಾದ ರಾಮೇಂದ್ರನ್, ಕಳೆಂಜ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಮಂಜುನಾಥ ಹೆಚ್, ಅಕಿಲ ಟ್ರಾನ್ಸ್‌ಪೋಟ್ ಮಹೇಶ್ ಏರಳಿಕೆ, ಜಿಜೋಯಿ ಕಾಯರ್ತಡ್ಕ, ನಾರಾಯಣ ಪಿಲಿಕಲ, ಎ.ಸಿ.ಎಲ್ ಕಮಿಟಿ ಅಧ್ಯಕ್ಷ ಸಿದ್ದೀಕ್ ಸಿ.ಪಿ ಉಪಸ್ಥಿತರಿದ್ದರು.