ಬಳಂಜ: ಸರಕಾರಿ ಶಾಲೆ ಎಂಬುದು ಊರಿನ ದೇವಾಲಯವಿದ್ದಂತೆ ಅನೇಕ ಸಾಧಕರು ಸರಕಾರಿ ಶಾಲೆಯಲ್ಲಿ ಕಲಿತು ಶ್ರೆಷ್ಠ ವ್ಯಕ್ತಿಗಳಾಗಿದ್ದಾರೆ.ಗ್ರಾಮೀಣ ಪರಂಪರೆಯನ್ನು ಬಾಲ್ಯದಿಂದಲೇ ಅರಿಯಲು ಸರಕಾರಿ ಶಾಲೆ ಪ್ರೇರಣೆಯಾಗಿದ್ದು ಇದರಿಂದ ಮಕ್ಕಳು ಸಂಸ್ಕಾರವನ್ನು ಕಲಿಯಲು ಸಾಧ್ಯವಾಗುತ್ತದೆ.ಗ್ರಾಮೀಣ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಕಾರಿ ಶಾಲೆ ಉಳಿಸಿ ಬೆಳೆಸಲು ಗ್ರಾಮಸ್ಥರು ಮುಂದಾಗಬೇಕು ಎಂದು ಬೆಳ್ತಂಗಡಿ ತಾಲೂಕು ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಅವರು ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಅಟ್ಲಾಜೆ-ಬಳಂಜ ಮತ್ತು ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲೀಷ್ ಜ್ಞಾನವನ್ನು ಪಡೆಯಬೇಕು. ಇದಕ್ಕಾಗಿ ಗ್ರಾಮಸ್ಥರು, ವಿದ್ಯಾಭಿಮಾನಿಗಳು ನುರಿತ ಆಂಗ್ಲ ಮಾಧ್ಯಮ ಶಿಕ್ಷಕಿಯನ್ನು ನೇಮಿಸಿ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣವನ್ನು ಕೊಡಲು ಮುಂದಾಗಬೇಕು ಇದಕ್ಕೆ ಬೆಸ್ಟ್ ಫೌಂಡೇಶನ್ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಮಾತನಾಡಿ ರಾಷ್ಟ್ರೀಯ ಹಬ್ಬಗಳು ಒಂದು ಜಾತಿ ಸಂಘಟನೆಯೊಳಗೆ ಆಚರಿಸದೆ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಮಾಡಿದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಇಂದು ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಗಣರಾಜ್ಯೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.
ಪತ್ರಕರ್ತ ಮನೋಹರ್ ಬಳಂಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್, ಉದ್ಯಮಿ ಅರುಣ್ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಕೊಂಗುಲ, ಪ್ರಗತಿಪರ ಕೃಷಿಕರಾದ ಸತೀಶ್ ರೈ ಬಾರ್ದಡ್ಕ, ರವೀಂದ್ರ ಪೂಜಾರಿ ಹೇವ, ಶಾಂತಪ್ಪ ಸುವರ್ಣ, ಶ್ಯಾಮ ಬಂಗೇರ ಪೆರಾಜೆ, ಅಜಿತ್ ರೈ ಅಟ್ಲಾಜೆ, ಗೋಪಾಲಕೃಷ್ಣ ಭಟ್ ಗಿಂಡಾಡಿ, ಲೋಲಾಕ್ಷ ಶೆಟ್ಟಿ ಅಟ್ಲಾಜೆ, ಭಾಸ್ಕರ್ ಕಾರ್ಯಾಣ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಜಯಾನಂದ ಪೆರಾಜೆ, ಪ್ರಭಾರ ಮುಖ್ಯೋಪಾಧ್ಯಾಯ ಪ್ರಮೋದ್ ಎಸ್., ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷೆ ರತ್ನ ಹೇವ, ಶಿಕ್ಷಕಿ ಶ್ವೇತಾ ಆರ್.ಡಿ., ಸರ್ವೋದಯ ಫ್ರೆಂಡ್ಸ್ ನ ಕಾರ್ಯದರ್ಶಿ ಪ್ರಣಮ್, ಕ್ರೀಡಾ ಕಾರ್ಯದರ್ಶಿ ಲತೇಶ್ ಪೆರಾಜೆ, ವಿದ್ಯಾರ್ಥಿ ನಾಯಕಿ ಶ್ರೀವಿತಾ, ಅವಿನಾಶ್ ಬೋಂಟ್ರೊಟ್ಟು, ಸಂತೋಷ್ ಜೈನ್ ಬಳಂಜ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಸುರೇಶ್ ಹೇವ ಗಣ್ಯರನ್ನು ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ವೈ ವಂದಿಸಿದರು.
ಇದೇ ಸಂದರ್ಭದಲ್ಲಿ ಬದುಕು ಕಟ್ಟೋಣ ತಂಡ ಉಜಿರೆ ನೀಡಿದ ಸಮವಸ್ತ್ರ ಹಾಗೂ ಇನ್ನಿತರ ಕೊಡುಗೆಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.ಸಾಧಕರಾದ ಪತ್ರಕರ್ತ ಮನೋಹರ್ ಬಳಂಜ ಮತ್ತು ಕರ್ನಾಟಕ ರೈತ ಸಂಘ ಕಾರ್ಕಳ ಇದರ ಅಧ್ಯಕ್ಷ ವೆಲೆರಿಯನ್ ಲೋಬೋ ಮತ್ತು ಅನುಸೂಯ ಕುಮಾರಿ ಕೆ.ಇವರನ್ನು ಸನ್ಮಾನಿಸಲಾಯಿತು.ಮತ್ತು ಸರ್ವೋದಯ ಪ್ರೆಂಡ್ಸ್ ನ ಲೋಗೋ ಅನಾವರಣಗೊಳಿಸಲಾಯಿತು.