ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅತಿಥಿಗಳಾಗಿ ಹರ್ಷ ಕುಮಾರ್ ಆಗಮಿಸಿ ಧ್ವಜಾರೋಹಣವನ್ನು ನಡೆಸಿಕೊಟ್ಟರು.ಬಳಿಕ ಮಾತನಾಡುತ್ತಾ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ನಾವು ಆಚರಿಸಬೇಕು.ಭಾರತದ ಇತಿಹಾಸ ,ಭಾರತದ ಪರಂಪರೆ, ಸ್ವರಾಜ್ಯದ ಮಹತ್ವ, ಒಗ್ಗಟ್ಟಿನ ಬಲ, ವಿದ್ಯಾರ್ಥಿಗಳ ಕರ್ತವ್ಯ ಹಾಗೂ ತನ್ನ ಗುಣದಲ್ಲಿ ಮಾಡಬೇಕಾದ ಉತ್ತಮ ಮಾರ್ಪಾಡುಗಳನ್ನು, ಸಂವಿಧಾನದ ರಚನೆ ಹಾಗೂ ಮಹತ್ವ ಇತ್ಯಾದಿಗಳನ್ನು ಹಲವು ಉದಾಹರಣೆ ಹಾಗೂ ಕಥೆಗಳ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತೆ ವಿವರಿಸಿದರು.
ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ಮತದಾನದ ಹಕ್ಕು, ಸಮಾನತೆ ಇತ್ಯಾದಿ ಹಲವು ವಿಚಾರಗಳನ್ನು ತಿಳಿಸಿ ಹೇಳಿದರು.
ಬಳಿಕ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮವನ್ನು ನೀಡಿ ಮನರಂಜಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಕುಮಾರಿ ಮನ್ವಿತ ಕಾರ್ಯಕ್ರಮ ನಡೆಸಿ ಕೊಟ್ಟು, ಮಾಸ್ಟರ್ ಜಸ್ವಿನ್ ಸ್ವಾಗತಿಸಿ, ಕುಮಾರಿ ಅಂಜನಾ ರೋಸ್ ಅತಿಥಿಗಳ ಪರಿಚಯ ಮಾಡಿ ಕುಮಾರಿ ಆಶಿತಾ ವಂದಿಸಿದರು.ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಭಾಗವಹಿಸಿದ್ದರು.