ಬೆಳ್ತಂಗಡಿಯಲ್ಲಿ ಕೋಟಕ್ ಲೈಫ್ ಉದ್ಘಾಟನಾ ಸಮಾರಂಭ

0

ಬೆಳ್ತಂಗಡಿ: ಕೋಟಕ್ ಲೈಫ್ ಬೆಳ್ತಂಗಡಿ ಶಾಖೆಯ ಉದ್ಘಾಟನಾ ಸಮಾರಂಭ ಜ.25ರಂದು ಬೆಳ್ತಂಗಡಿ ವೈಭವ ಆರ್ಕೇಡ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ನೆರವೇರಿಸಿದರು.

ಬೆಳ್ತಂಗಡಿ ಕೋಟಕ್ ಲೈಫ್ ಪ್ರೋವಿಜಿನಲ್ ಚೀಫ್ ಏಜೆನ್ಸಿ ಪಾಟ್ನರ್ ದಿನಾಕರ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಕೋಟಕ್ ಲೈಫ್ ರಿಜಿನಲ್ ಹೆಡ್ ಅಬ್ದುಲ್ ಗಫೂರ್, ಮಂಗಳೂರು ಕೋಟಕ್ ಲೈಫ್ ಏರಿಯಾ ಹೆಡ್ ಮೈಕಲ್ ಡಿಸೋಜ, ಬೆಳ್ತಂಗಡಿ ವೈಭವ್ ಆರ್ಕೇಡ್ ನ ಮಾಲಿಕರಾದ ಸೀತಾರಾಮ್ ಶೆಟ್ಟಿ, ಉದ್ಯಮಿಗಳಾದ ರಾಮಣ್ಣ ಗೌಡ ಕೆಚೋಡಿ, ಮಂಗಳೂರು ಕೋಟಕ್ ಲೈಫ್ ಚೀಫ್ ಏಜೆನ್ಸಿ ಪಾರ್ಟ್ನರ್ ಡೋಲ್ಪ್ ಮೊಂತೆರೊ, ಮಂಗಳೂರು ಕೋಟಕ್ ಲೈಫ್ ಎಕ್ಸಿಕ್ಯೂಟಿವ್ ಚೀಫ್ ಏಜೆನ್ಸಿ ಪಾರ್ಟ್ನರ್ ಸತ್ಯರಂಜನ್ ಕುಮಾರ್ ಉಪಸ್ಥಿತರಿದ್ದರು.

ಸತ್ಯರಂಜನ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯೋಗಿಶ್ ಅಲಂಬಿಲ ಸ್ವಾಗತಿಸಿ, ಗಿರೀಶ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here