



ಉಜಿರೆ: ಜ.23ರಂದು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋಲ್ಗೇಟ್ ಬ್ರೈಟ್ ಸ್ಮೈಲ್ಸ್ ಬ್ರೈಟ್ ಫ್ಯೂಚರ್ ಎನ್ನುವ ಅರ್ಥಪೂರ್ಣವಾದ ಕಾರ್ಯಕ್ರಮವು ಆಂಡ್ರಿಯಾ ಮತ್ತು ರಾಕೇಶ್ ರವರ ನೇತೃತ್ವದಲ್ಲಿ ನಡೆಯಿತು.
ಮೌಖಿಕ ಅಂಗಗಳಾದ ಹಲ್ಲು, ನಾಲಿಗೆ, ಬಾಯಿ ಇವುಗಳ ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳಬೇಕು.ಬ್ರಶ್ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಬ್ರಶನ್ನು 3 ತಿಂಗಳಿಗೊಮ್ಮೆ ಬದಲಾಯಿಸಬೇಕು.ಹಲ್ಲುಗಳನ್ನು ಸರಿಯಾಗಿ ಉಜ್ಜದಿದ್ದರೆ ಆಗುವ ತೊಂದರೆಗಳು, ಹಲ್ಲುಗಳನ್ನು ಬಲಿಷ್ಟವಾಗಿರಿಸಲು ತಿನ್ನಬೇಕಾದ ಆಹಾರಗಳ ಮಾಹಿತಿ ಇವೆಲ್ಲವನ್ನೂ ಮಕ್ಕಳಿಗೆ ಮನದಟ್ಟು ಆಗುವಂತೆ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.


ಮಕ್ಕಳಿಗೆ ಉಚಿತವಾಗಿ ಬ್ರಶ್ ಮತ್ತು ಕೋಲ್ಗೇಟ್ ಪೇಸ್ಟ್ ನ್ನು ವಿತರಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿ ಸೆಲೆಸ್ಟಿನ್ ಪಿಂಟೋ ಇವರು ಸ್ವಾಗತಿಸಿ, ಸಿಸ್ಟರ್ ಸಿರಿಶಾ ವಂದಿಸಿದರು.








