ಜ.25: ಬೆಳ್ತಂಗಡಿ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ

0

ಬೆಳ್ತಂಗಡಿ: ಜ.25ರಂದು ಪೂರ್ವಾಹ್ನ 9-00ಕ್ಕೆ ರೋಟರಿ ಜಿಲ್ಲೆ 3181ನ ಜಿಲ್ಲಾ ಗವರ್ನರ್ ರೊ.ಮೇಜರ್ ಡೋನರ್ ಹೆಚ್.ಆರ್ ಕೇಶವ್ ಅವರು ಬೆಳ್ತಂಗಡಿ ರೊಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದು ಕ್ಲಬ್ ಹಾಗೂ ರೋಟರಿ ಬೆಂಗಳೂರು ಇಂದಿರಾ ನಗರ, ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್, ಇಂಟೆಲ್ ಇಂಡಿಯಾ (ಲಿ.) ಮತ್ತು ವಿವಿಧ ಸಂಘ ಸಂಸ್ಥೆಗಳು ಒಡಗೂಡಿ ಮಾಡಿದ ಸಾಮಾಜಿಕ ಕೆಲಸಗಳ ಹಸ್ತಾಂತರ-ಉದ್ಘಾಟನೆ ನಡೆಯಲಿದ್ದು ಪ್ರಮುಖವಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸುಮಾರು 40 ಲಕ್ಷ ವೆಚ್ಚದ ನಾಲ್ಕು ಡಯಾಲಿಸಿಸ್ ಯಂತ್ರ ಹಾಗೂ ಒಂದು ಆರ್.ಒ ಪ್ಲಾಂಟ್, ಕೊಯ್ಯೂರು ಸರಕಾರಿ ಪ್ರೌಢ ಶಾಲೆಗೆ ಸುಮಾರು 12 ಲಕ್ಷ ವೆಚ್ಚದ ವಿದ್ಯಾರ್ಥಿನಿಯರ ಶೌಚಾಲಯ, ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಗೆ 5ಕೆ.ವಿ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಹಾಗೂ ಮಾಯ ಮುರತ್ತಳಿಕೆ ಭವ್ಯ ಗೌಡ ಇವರಿಗೆ ಮನೆಯ ಹಸ್ತಾಂತರ ಮಾಡಲಿದ್ದಾರೆ.

ಸಾಯಂಕಾಲ 6-30ರಿಂದ ಕಾಶಿಬೆಟ್ಟು ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಸಾಧಕರಿಗೆ ಸನ್ಮಾನ, ವಲಯ ಸೇನಾನಿ ರೊ.ಯಶವಂತ ಪಟವರ್ಧನ್, ಜಿಲ್ಲಾ ಸಹಾಯಕ ಗವರ್ನರ್ ರೊ.ಡಾ| ರಮೇಶ ಮತ್ತು ಜಿಲ್ಲಾ ಗವರ್ನರ್ ರವರು ಸಂದೇಶವನ್ನು ನೀಡಲಿದ್ದಾರೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರು ರೊ.ಅನಂತ್ ಮಚ್ಚಿಮಲೆ ಹಾಗೂ ಕಾರ್ಯದರ್ಶಿಗಳಾದ ರೊ.ವಿದ್ಯಾಕುಮಾರ್ ಕಾಂಚೋಡು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here