ಮರೋಡಿ : ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ ಇಲ್ಲಿಯ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ ಜ.25 ರಿಂದ 29ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.25 ರಂದು ಬೆಳಿಗ್ಗೆ ವಾಸ್ತುರಾಕ್ಷಘ್ನ ಹೋಮ, ನಿತ್ಯ ಪೂಜೆ, ಜ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ನವಕಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಧ್ವಜಾರೋಹಣ, ಪ್ರಸಾದ್ ವಿತರಣೆ, ಅನ್ನಸಂತರ್ಪಣೆ ಸಂಜೆ ಕುಣಿತ ಭಜನೆ, ದೊಡ್ಡ ರಂಗ ಪೂಜೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಲಿ ಉತ್ಸವ, ಮಹಾಪೂಜೆ, ನಿತ್ಯಬಲಿ, ವ್ಯಾಘ್ರಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಜ.27ರಂದು ಬೆಳಿಗ್ಗೆ ಆಶ್ಲೇಷಬಲಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮದ್ಯಾಹ್ನ ಧಾರ್ಮಿಕ ಸಭೆ, ಮಹಾಪೂಜೆ ಅನ್ನಸಂತರ್ಪಣೆ, ಸಂಜೆ ಉತ್ಸವ ಬಲಿ, ಮಹಾ ಪೂಜೆ, ಶ್ರೀ ಭೂತ ಬಲಿ, ಕವಾಟ ಬಂಧನ, ಪಟ್ಟದ ಪಂಜುರ್ಲಿ ಮತ್ತು ಕಲ್ಕಡ ದೈವಗಳಿಗೆ ಕೋಲ,ಜ.28 ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಕಳಶಾಭಿಷೇಕ, ಅಲಂಕಾರ ಪೂಜೆ, ಚುರ್ಣೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜ.29 ರಂದು ಬೆಳಿಗ್ಗೆ ಸಂಪ್ರೊಕ್ಷಣೆ, ಕಳಶಾಭಿಷೇಕ, ಮಂಗಲ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮೋಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರಧಾನ ಕಾರ್ಯದರ್ಶಿ ಜಯಂತ ಕೋಟ್ಯಾನ್ ತಿಳಿಸಿದ್ದಾರೆ.