ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶ್ರೀ ರಾಮ ತಾರಕ 1001 ಜಪಯಜ್ಞ

0

ಶಿಬಾಜೆ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮೊಂಟೆತಡ್ಕ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ರಾಮ ತಾರಕ 1001 ಜಪಯಜ್ಞ ಜ.22ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಊರ ಪರವೂರ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.ಬೆಳಗ್ಗೆ 9ಗಂಟೆಗೆ ದೇವತಾ ಪ್ರಾರ್ಥನೆ ಹಾಗೂ ಅಗ್ನಿ ಪ್ರತಿಷ್ಠೆ, ಶ್ರೀ ರಾಮ ನಾಮ ಜಪ ಭಜನೆ ನಂತರ ಪೂರ್ಣಾಹುತಿ, ದೇವಿ ಸನ್ನಿಧಿಯಲ್ಲಿ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ನಾಯಕ್ ಮತ್ತು ಸರ್ವಸದಸ್ಯರು, ಕರಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here