ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಗ್ನಿ ಸುರಕ್ಷತೆ, ಅಗ್ನಿಶಾಮಕ ಕಾರ್ಯಕ್ರಮ

0

ಉಜಿರೆ: ಜ.20ರಂದು ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಉಜಿರೆಯ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಅಗ್ನಿ ಸುರಕ್ಷತೆ ಮತ್ತು ಅಗ್ನಿಶಾಮಕದ ಕಾರ್ಯಕ್ರಮ ಜರಗಿತು.

ಇದರ ಅಧ್ಯಕ್ಷತೆಯನ್ನು ಎಸ್ ಡಿ ಎಂ ಪಾಲಿಟೆಕ್ನಿಕ್ ನ ಪ್ರಾಂಶುಪಾಲ ಸಂತೋಷ್ ಇವರು ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಉಸ್ಮಾನ್ ಹಾಗೂ ಬಸವರಾಜ್ ಇವರು ವಹಿಸಿ ವಿದ್ಯಾರ್ಥಿಗಳಿಗೆ ಅಗ್ನಿಯ ವಿಧಗಳು, ಅಗ್ನಿಯ ಆಕಸ್ಮಿಕ ಹಾಗೂ ಅಗ್ನಿ ನಂದಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಪ್ರಕಾಶ್ ಮತ್ತು ಯುವ ರೆಡ್ ಕ್ರಾಸ್ ನ ಯೋಜನಾಧಿಕಾರಿಗಳಾದ ಅವನೀಶ್ ಪಿ ಮತ್ತು ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here