ಉಪ್ಪಿನಂಗಡಿಯಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ ” ನೂತನ ಶಾಖೆ ಉದ್ಘಾಟನೆ

0

ಬೆಳ್ತಂಗಡಿ: ಮರಕ್ಕೆ ಪರ್ಯಾಯವಾಗಿ ಸಿಮೆಂಟಿನಿಂದ ತಯಾರಿಸಲಾದ ಕಟ್ಟಡ ಸಾಮಾಗ್ರಿಗಳನ್ನು ಪರಿಚಯಿಸಿದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ರಾಜು ಮೇಸ್ತ್ರೀಯವರ ಕನಸಿನ ಕೂಸು. ಈ ಸಂಸ್ಥೆಗೆ ಈಗ 36ರ ಹರೆಯ. ಪುಟ್ಟ ಪುಟ್ಟ ಹೆಜ್ಜೆಗಳಿಡುತ್ತಾ ಬೆಳೆದು ಈ ನಾಡಿನ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಂಸ್ಥೆಯ ಸಾಧನೆಯ ಹಿರಿಮೆಗೆ ಮತ್ತೊಂದುಗರಿ ಎಂಬಂತೆ ಇದೀಗ ಮೂಡಿ ಬಂದಿರುವ ನೂತನ ಸಹ ಸಂಸ್ಥೆ ‘ಕನಸಿನ ಮನೆ’ ಉಪ್ಪಿನಂಗಡಿಯಲ್ಲಿ ಜನಸೇವೆಗೆ ಜ.14ರಂದು ಅನಾವರಣಗೊಂಡಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಉಪ್ಪಿನಂಗಡಿಯ ಬಿ.ಎಮ್ ಆರ್ಕೆಡ್‌ನಲ್ಲಿ ಕೆ. ಮೋಹನ್ ಕುಮಾರ್ ಮಾಲಕತ್ವದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಇದರ ಪ್ರಾರಂಭೋತ್ಸವವು ಜ.14 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಿದರು. ಬರೋಡ ಉದ್ಯಮಿ, ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ.ಲಿ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ ಸಿಂಹ ನಾಯಕ್, ಪುತ್ತೂರು ಕೌಶಲ್ ಕನ್‌ಸ್ಟ್ರಕ್ಷನ್ ಮಾಲಕ ನವೀನ್ ಕುಮಾರ್, ಉಪ್ಪಿನಂಗಡಿ ಬಿ.ಕೆ. ಕನ್‌ಸ್ಟ್ರಕ್ಷನ್ ಮಾಲಕ ಬಿ.ಕೆ. ಸುಲೈಮಾನ್, ಬದುಕು ಕಟ್ಟೋಣ ತಂಡದ ಸಂಚಾಲಕ ರಾಜೇಶ್ ಪೈ ಭಾಗವಹಿಸಿ ಶುಭಹಾರೈಸಿದರು.

ಲಭ್ಯವಿರುವ ಉತ್ಪನ್ನಗಳು: ನೂತನ ತಂತ್ರಜ್ಞಾನ ಆಕರ್ಷಕ ವಿನ್ಯಾಸಗಳೊಂದಿಗೆನಿಮ್ಮ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶನೀಡುವ ಉತ್ಪನ್ನಗಳಾದ ಸಿಮೆಂಟ್ – ಫೈಬರ್-ಸ್ಟೀಲ್‌ನ ದಾರಂದ,ಕಿಟಕಿ ಪ್ರೇಮ್, ಬಾಗಿಲು, ಡಬ್ಲ್ಯು.ಪಿ.ಸಿ. ಡೋರ್ ಪ್ರೇಮ್,ವಿಂಡೋಸ್ ಪ್ರೇಮ್‌ಗಳು, ಅಲ್ಯುಮಿನಿಯಂ ಬಾತ್‌ರೂಮ್ ಡೋರ್‌ಗಳು ಇಲ್ಲಿ ಲಭ್ಯ.

LEAVE A REPLY

Please enter your comment!
Please enter your name here