ಎಕ್ಸೆಲ್ ಗೆ ಎಸ್.ಡಿ.ಎಂ ನ ಎಕ್ಸ್ ಪಿರಿಯ ವಿಜ್ಞಾನ ಮೇಳದಲ್ಲಿ ಚಾಂಪಿಯನ್ ಶಿಪ್

0

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜು ಉಜಿರೆಯಲ್ಲಿ ನಡೆದ ‘ಎಕ್ಸ್ ಪಿರಿಯ’ ವಿಜ್ಞಾನ ಮೇಳದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚಾಂಪಿಯನ್ ಶಿಪ್ ಪಡೆದು ಕೊಂಡಿದ್ದಾರೆ.

ಸೈನ್ಸ್ ಟ್ರೆಷರ್ ಹಂಟ್ ನಲ್ಲಿ ಮನೋಜ್ಞ ಎಸ್, ಸಂಜನಾ ಎಸ್, ನೇಹಾ ಪ್ರಣತಿ ಸಿ ಪ್ರಥಮ ಸ್ಥಾನ ಪಡೆದರೆ, ದೀಕ್ಷಿತ್ ಎನ್.ಆರ್, ವಿವೇಕ್ ಎಸ್, ಧೀರಜ್ ಎಸ್.ಎ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕ್ರಾಕ್ ದ ಪ್ರಾಬ್ಲಂ ನಲ್ಲಿ ಚಿನ್ಮಯಿ ಎಸ್, ಹರಿಪ್ರಿಯಾ.ಎಲ್.ಎಸ್, ಮಧುಶ್ರೀ ಎಸ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ವಿಜ್ಞಾನ ರಸಪ್ರಶ್ನೆಯಲ್ಲಿ ಶ್ರೇಯಾಂಕ ಪಿ ಹೆಗ್ಡೆ, ಅಮಯ್ ಕೆ.ಎಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಓವರಾಲ್ ಚಾಂಪಿಯನ್ ಶಿಪ್ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಳಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here