ಮಾಚಾರು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ

0

ಉಜಿರೆ: ಧರ್ಮಶಿಕ್ಷಣದ ಕೊರತೆಯಿಂದ ನಮ್ಮ ಹಿರಿಯರು ತಿಳಿಸಿದ ಧಾರ್ಮಿಕ ಆಚರಣೆಗಳು ಇಂದು ದೂರ ಸಾಗುತ್ತಿವೆ ಎಂದು ಮಾಚಾರು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಮೊಕ್ತೇಸರ ಜಿ.ಗೋಪಾಲಕೃಷ್ಣ ಉಪಾಧ್ಯಯ ಹೇಳಿದರು.

ಅವರು ಡಿ.31 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ, ಕೋರ್ಯಾರು ಗುತ್ತು ಮಾಚಾರಿನಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಇಂದು ನಾವೆಲ್ಲರೂ ಹಿಂದೂ ಧರ್ಮದ ಬಗ್ಗೆ ಎಷ್ಟು ತಿಳಿದಿದ್ದೇವೆ ಎಂಬುವುದು ಮುಖ್ಯ ಇದೆ.ದೇವಸ್ಥಾನಕ್ಕೆ ಹೋಗುವಾಗ ಸಾತ್ವಿಕ ವಸ್ತ್ರ ಧರಿಸದೆ ಮನಸ್ಸಿಗೆ ಬಂದ ವೇಷ ಭೂಷಣಗಳಿಂದ ದೇವಸ್ಥಾನಕ್ಕೆ ಹೋಗುತ್ತೇವೆ.ಅಂದರೆ ನಮಗೆ ಅಲ್ಲಿನ ಪಾವಿತ್ರ್ಯದ ಬಗ್ಗೆ ಗಮನವಿರುವುದಿಲ್ಲ.ನೂತನ ಮನೆಯ ಗೃಹಪ್ರವೇಶಕ್ಕೆ ಮೊದಲಿಗೆ ಗೋಮಾತೆಯ ಪೂಜೆ ಮಾಡುವ ಮಹತ್ವವೇನು, ಮನೆಯಲ್ಲಿ ಗಣಹೋಮ ಮಾಡುವ ಉದ್ದೇಶವೇನು ಇದರ ಬಗ್ಗೆ ಜ್ಞಾನವಿಲ್ಲದ ಕಾರಣ ಮತ್ತು ಧರ್ಮಶಿಕ್ಷಣದ ಅಭಾವದಿಂದ ಹಿರಿಯರು ತಿಳಿಸಿಕೊಟ್ಟ ಧಾರ್ಮಿಕ ಆಚರಣೆಗಳಿಂದ ನಾವೆಲ್ಲರೂ ದೂರ ದೂರ ಸಾಗುತ್ತಿದ್ದೇವೆ.ಅದಕ್ಕಾಗಿ ಎಲ್ಲ ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ವಿಜಯಕುಮಾರ್ ರವರು ಮಾತನಾಡುತ್ತಾ, 100 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇರುವ ಹಿಂದೂಗಳಿಗೆ ಅವರದೇ ಆದ ದೇಶ ಇಲ್ಲ. ಭಾರತ ದೇಶ ಹಿಂದೂ ದೇಶವಾಗಿದ್ದರು ಅದು ಈಗ ಜಾತ್ಯಾತೀತ ದೇಶವಾಗಿದೆ. ನಮ್ಮ ಹಿಂದೂಗಳು ಸ್ವಂತ ವಿಚಾರದಲ್ಲಿಯೇ ಮುಳುಗಿದ್ದೇವೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ಮಾಡಿ ಹಿಂದೂಗಳಿಗೆ ಆತ್ಮಸ್ಥೈರ್ಯವನ್ನು ತುಂಬಿಸುವ ಪ್ರಯತ್ನ ಮಾಡುತ್ತಿದೆ.ಅದಕ್ಕಾಗಿ ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ. ರಾಷ್ಟ್ರರಕ್ಷಣೆ ಕಾರ್ಯದಲ್ಲಿ ಹಿಂದೂಗಳನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಹೇಳಿದರು.ಇಂದು ನಾವು ಧರ್ಮದ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ.ಇಂತಹ ಹೋರಾಟವನ್ನು ಮಾಡಲು ಭಗವಂತನ ಅಧಿಷ್ಠಾನವಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಧರ್ಮಶಿಕ್ಷಣವನ್ನು ಪಡೆದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಸುಮಾರು 130ಕ್ಕೂ ಅಧಿಕ ಹಿಂದೂ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here