ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬ

0

ಬೆಳ್ತಂಗಡಿ: ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬವನ್ನು ಡಿ.24 ರಂದು ರಾತ್ರಿ ಆಚರಿಸಲಾಯಿತು.

ಸಂಭ್ರಮದ ದಿವ್ಯ ಬಲಿ ಪೂಜೆಯನ್ನು ಕಿರೆಂ ಮುಖ್ಯ ಧರ್ಮ ಗುರು ಫಾ.ಜಾರ್ಜ್ ಕ್ರಾಸ್ತ ಸಂದೇಶ ನೀಡಿದರು ಹಾಗೂ ಪೂಜೆ ಬಳಿಕ ಮಕ್ಕಳ ಕಾರ್ಯಕ್ರಮ, ಕ್ರಿಸ್ಮಸ್ ಕೇಕ್ ಎಲಂ ನಡೆಯಿತು.

ನಿಕಟಪೂರ್ವ ಉಪಾಧ್ಯಕ್ಷ ಫೆಡ್ರಿಕ್ ಡಿ ಕೋಸ್ಟಾ ನೆರವೇರಿಸಿದರು,ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮ ಗುರು ಫಾ.ಬರ್ನಾಡ್ ರೋಡ್ರಿಗಸ್, ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಅಲೆಕ್ಸ್ ವೇಗಸ್, ಕಾರ್ಯದರ್ಶಿ ಲವೀನಾ ಫೆರಾವೋ, ಪಾಲನ ಮಂಡಳಿಯ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಸಹಕರಿಸಿದರು.ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಸ್ವಾರ್ ತಿಂಡಿ ಪ್ರತಿಯೊಬ್ಬರಿಗೂ ವಿತರಿಸಲಾಯಿತು.

LEAVE A REPLY

Please enter your comment!
Please enter your name here