ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಇದರ ವಾರ್ಷಿಕೋತ್ಸವವು ಡಿ.22ರಂದು ನಡೆಯಿತು.
ಮುಖ್ಯ ಅತಿಥಿಗಳಾದ ಎಸ್.ಡಿ.ಯಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಭಾಗವಹಿಸಿ ಶಾಲಾ ವಾರ್ಷಿಕ ಸಂಚಿಕೆ “ಬೆಳಗು” ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಉಜಿರೆ ಎಸ್.ಡಿ.ಯಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ನೈಋತ್ಯ ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ತಿನ ಸದಸ್ಯ ಭೋಜಗೌಡರು ಕಾರ‍್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.ಎಸ್.ಡಿ.ಯಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಕಾರ್ಯಕಮ್ರದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಭರತನಾಟ್ಯ, ಕುಣಿತ ಭಜನೆ, ಯಕ್ಷಗಾನ, ದೇಶಭಕ್ತಿಗೀತೆ ಸಹಿತ ವಿವಿಧ ಪ್ರಕಾರಗಳ ನೃತ್ಯಗಳ ಮೂಲಕ ತಮ್ಮಲ್ಲಿರುವ ಕಲಾಪ್ರತಿಭೆಯನ್ನು ಸಭಿಕರ ಮುಂದೆ ಪ್ರದರ್ಶಿಸಿದರು.
ಮುಖ್ಯೋಪಾಧ್ಯಯ ಸುರೇಶ್.ಕೆ ಸ್ವಾಗತಿಸಿ, ವಂದಿಸಿದರು.
ಶಿಕ್ಷಕರಾದ ಜ್ಞಾನೇಶ್, ತ್ರಿವೇಣಿ ಹಾಗೂ ವಿದ್ಯಾರ್ಥಿಗಳಾದ ಧನಲಕ್ಷ್ಮೀ, ಪ್ರಥಮ್, ಅನನ್ಯ ಕಾರ್ಯಕ್ರಮ ನಿರೂಪಿಸಿದರು.