ಪುಂಜಾಲಕಟ್ಟೆ : ಬುರೂಜ್ ಆಂಗ್ಲಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿ 2023-24 ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪೋಷಕರಿಗೆ ಮತ್ತು ಹಳೆವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಉದ್ಘಾಟನೆಯನ್ನು ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ವಿಮಲಾ ರವರು ನೆರವೇರಿಸಿದರು.ಪೋಷಕರ ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಕ್ಯಾಂಡಲ್ ಉರಿಸುವುದು, ಗೋಲಿ ಮತ್ತು ಚಮಚ ,ಸಂಗೀತ ಕುರ್ಚಿ, ಗುಂಡು ಎಸೆತ, ತ್ರೋಬಾಲ್,ವಾಲಿಬಾಲ್ ,ಹಿಂದೆ ನಡೆ ,ಹಗ್ಗಜಗ್ಗಾಟ,100 ಮೀಟರ್ ಓಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ವನ್ನು ನೀಡಲಾಯಿತು.
ಅಬ್ದುಲ್ ಲತೀಫ್, ಮೊಹಮ್ಮದ್ ಝಮೀರ್ ಎನ್.ಸಿ ರೋಡ್ ,ಮೊಹಮ್ಮದ್ ಆಸೀಫ್ ,ಆಸೀಫ್, ಅಬ್ದುಲ್ ರಹೀಂ, ಶಾಹುಲ್ ಹಮೀದ್ ,ಅನ್ವರ್ ಪಾಷ, ಶಬೀರ್, ವಸೀಂ ವಾಮದಪದವು, ಹಸನ್ ನೈನಾಡು ,ಸಾದಿಕ್ ಭದ್ರಾವತಿ ಮಹಿಳೆಯರ ವಿಭಾಗದಲ್ಲಿ ಶಬನಾ , ಸೆಲಿಕಾ,ಶಮೀಮ, ಅಸ್ಮಾ ರೇಖಾ,ಹೇಮಲತಾ ,ಝರೀನಾ, ಶಬಾನಾ ಮನ್ಸೂರ್, ಪರ್ಝಾನ ,ಶೆಹನಾಝ್, ಪ್ರಮೀಳ ,ಪ್ರಿಯಾಂಕ,ಶುಭ, ಮೊಸಿನಾಬಾನು ,ಕುಲ್ಸುಂ,ರಮ್ಲತ್,ರಮ್ಯ,ಸುಮತಿ,ಹೇಮಲತಾ ,ಶಂಶಾದ್, ನೇತ್ರ ಜಾದರ್ ,ಶಮೀಮ್, ಹಾಜಿರ ,ಫಾತಿಮ, ಪರ್ಹಾನ ವಿಜೇತರಾಗಿದ್ದಾರೆ.
ಹಳೆ ವಿದ್ಯಾರ್ಥಿಗಳ ವಿಭಾಗದಲ್ಲಿ ಅಬುಸೂಫಿಯಾನ್,ಅಪ್ಪ್ನಾನ್ , ಕಿರ್ತೇಶ್, ಶಬೀಬ್, ಮೊಹಮ್ಮದ್ ಅಖೀಲ್ ,ಮೊಹಮ್ಮದ್ ಇಫಾಝ್ ವಿಜೇತರಾಗಿರುತ್ತಾರೆ.
ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಆಟೋಟ ಸ್ಪರ್ಧೆಯನ್ನು ಸುಗಮವಾಗಿ ನಡೆಸಿಕೊಟ್ಟಿರುತ್ತಾರೆ.ವಿದ್ಯಾರ್ಥಿಗಳ ಸಹಕಾರವು ಉತ್ತಮವಾಗಿತ್ತು.ಮಜ್ಜಿಗೆ ಹಾಗೂ ಕಲ್ಲಂಗಡಿ ವ್ಯವಸ್ಥೆಯನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾರವರು ಏರ್ಪಡಿಸಿದ್ದರು.ಎಲ್.ಕೆ.ಜಿ ವಿದ್ಯಾರ್ಥಿನಿ ಐಝಾ ಫಾತಿಮ ಪೋಷಕರಾದ ಅಬ್ದುಲ್ ಲತೀಫ್ ಮಕ್ಕಳಿಗೆ ಸಿಹಿತಿಂಡಿ ನೀಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎಲ್ಸಿ ಲಸ್ರಾದೋ ನಿರ್ವಹಿಸಿದರು.