ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಸೆಂಟರ್ ನಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಡಯಾಲಿಸಿಸ್ ರೋಗಿಗಳು ಜೀವನದ ಕೊನೆಯ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಇಲ್ಲವಾದಲ್ಲಿ ಸಾಯುವ ಔಷಧಿ ಕೊಟ್ಟು ಸಾಯಿಸಿ.ದೇವರು ಕೊಟ್ಟ ಜೀವವನ್ನು ಕೈಯ್ಯಾರೆ ಸಾಯಿಸಿಕೊಳ್ಳಲು ಮನಸ್ಸು ಬರುವುದಿಲ್ಲ ಎಂದು ಅಳವತ್ತುಕೊಂಡ ಘಟನೆ ಮಂಗಳವಾರ ನಡೆಯಿತು.
ಡಯಾಲಿಸಿಸ್ ಸೆಂಟರ್ ನಲ್ಲಿ ಸೂಕ್ತ ಸೌಲಭ್ಯವಿಲ್ಲದೆ ಡಯಾಲಿಸಿಸ್ ರೋಗಿಗಳು ಪಡೆಯುವ ಹಿಂಸೆಯನ್ನು ರೋಗಿಗಳು ಮಾಜಿ ಶಾಸಕ ಕೆ.ವಸಂತ ಬಂಗೇರರವರಲ್ಲಿ ಸರಿಪಡಿಸುವಂತೆ ಅಳವತ್ತುಕೊಂಡರು.ವಿದ್ಯುತ್ ಕಡಿತಗೊಂಡರೆ ತಕ್ಷಣ ವಿದ್ಯುತ್ ಬರದೆ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಗಿ ಅನೇಕ ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.ಸರಿಯಾಗಿ ನೀರಿನ ಸಂಪರ್ಕ ಇರುವುದಿಲ್ಲ.ಡಯಾಲಿಸಿಸ್ ಪಡೆಯುವ ರೋಗಿಗಳು ಅಧಿಕವಿದ್ದರೂ ಸೂಕ್ತ ಸೌಲಭ್ಯವಿಲ್ಲ, ಹದೆಗೆಟ್ಟ ಫ್ಯಾನ್, ಸಮರ್ಪಕವಿಲ್ಲದ ನಿಟ್ಟಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ.ರೋಗಿಗಳಿಗೆ ಅನುಪಾತವಾಗಿ ಸಿಬ್ಬಂದಿಗಳಿಲ್ಲ.ರೋಗ ಉಲ್ಬಣಗೊಂಡ ರೋಗಿಗಳನ್ನು ನೋಡಿಕೊಳ್ಳಲು ಇರುವ ಸಿಬ್ಬಂದಿಗಳಿಗೆ ಸಾಧ್ಯವಾಗುವುದಿಲ್ಲ, ಹವಾನಿಯಂತ್ರಣವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನೋವನ್ನು ಹಂಚಿಕೊಂಡರು.
ಹೆಚ್.ಸಿ.ಸಿ ರೋಗ ಹರಡಿದೆ: ಡಯಾಲಿಸಿಸ್ ಯಂತ್ರಗಳ ಸಮರ್ಪಕ ನಿರ್ವಹಣೆಗಳಿಲ್ಲದೆ ಹೊರಗಿನಿಂದ ಡಯಾಲಿಸಿಸ್ ಮಾಡಿ ಬಂದ ರೋಗಿಗಳಿಂದ ಹೆಚ್.ಸಿ.ಸಿ ರೋಗ 50 ಶೇಕಡಾ ರೋಗಿಗಳಿಗೆ ಹರಡಿದ್ದು, ಇದು ಡಯಾಲಿಸಿಸ್ ಸೆಂಟರ್ ನ ನಿರ್ಲಕ್ಷ್ಯತೆಯಿಂದ ಹರಡಿದ್ದು ಬಡ ರೋಗಿಗಳು ತಿಂಗಳಿಗೆ 15,000 ರೂ.ಹೆಚ್ಚುವರಿ ಖರ್ಚು ಮಾಡಬೇಕಾದ ಸ್ಥಿತಿ ಬಂದಿದೆ.ಇದನ್ನು ಭರಿಸುವವರು ಯಾರು?, ರಕ್ತ ಪರೀಕ್ಷೆ, ಇನ್ನಿತರ ಔಷಧಿಗಳಿಗೆ ಚಿಕಿತ್ಸೆ ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ರೋಗಿಗಳು.ಖಾಸಗಿ ಆಸ್ಪತ್ರೆಯಲ್ಲಿ ಅಂತೂ ಚಿಕಿತ್ಸೆ ಪಡೆಯಲು ಬಡವರಾದ ನಮ್ಮಿಂದ ಸಾಧ್ಯವೇ ಎಂದು ನೋವನ್ನು ವ್ಯಕ್ತಪಡಿಸಿದರು.