ಬೆಳಾಲು: ಪೆರಿಯಡ್ಕ ಸ.ಕಿ.ಪ್ರಾ.ಶಾಲೆಗೆ ಬದುಕು ಕಟ್ಟೋಣ ಬನ್ನಿ ಟ್ರಸ್ಟ್ ನಿಂದ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ

0

ಬೆಳಾಲು : ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಆಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ’ ಬಿ ಬೆಳಾಲು ಇಲ್ಲಿಗೆ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮ ಡಿ 10 ರಂದು ಶಾಲೆಯಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರಿಸ್ ಕನಸಿನ ಮನೆ ಮಾಲಕ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ವಹಿಸಿದ್ದರು.

ಉಜಿರೆ ಶ್ರೀ ಧ. ಮ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಬೆಳಾಲು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ, ಸುರೇಂದ್ರ ಗೌಡ, ಯಶೋಧ, ಕೃಷ್ಣಯ್ಯ ಆಚಾರ್ಯ, ಉದ್ಯಮಿ ಬೆಳಾಲು ಮೀನಂದೇಲು ಸ್ಟೋರ್ ಜಯಣ್ಣ ಗೌಡ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವಕೀಲ ಬಿ. ಕೆ. ಧನಂಜಯ ರಾವ್, ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಶಿಕ್ಷಣ ಇಲಾಖೆಯ ಕ್ಲಸ್ಟರ್ ಕೇಂದ್ರದ ಸಿ ಆರ್ ಪಿ ಪ್ರತಿಮಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ ಮಡಿವಾಳ,ಮುಖ್ಯ ಶಿಕ್ಷಕಿ ವಿಜಯ, ಶಾಲಾ ನಾಯಕ ಹೇಮಂತ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವೇಕ್ ಹಳೆ ವಿದ್ಯಾರ್ಥಿ ಸಂಘ, ಚಿತ್ತಾರ ಗೆಳೆಯರ ಬಳಗ, ರೋಟರಿಕ್ಲಬ್ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಮಾಜಿ ಕಾರ್ಯದರ್ಶಿ ಶ್ರೀಧರ ಕೆ. ವಿ., ಮಾಯ ಶಾಲಾ ಮುಖ್ಯ ಶಿಕ್ಷಕ ವಿಠ್ಠಲ ಎಂ, ಕೊಲ್ಪಾಡಿ ಕಿ. ಪ್ರಾ ಶಾಲಾ ಮುಖ್ಯ ಶಿಕ್ಷಕ ಸುರೇಶ ಎಂ., ನಿವೃತ್ತ ಶಿಕ್ಷಕ ವೀರಣ್ಣ ಶೆಟ್ಟಿ, ನೋಟರಿ ವಕೀಲ ಶ್ರೀನಿವಾಸ ಗೌಡ, ಹಿರಿಯರಾದ ದೇಜಪ್ಪ ಗೌಡ ಅರಣೆಮಾರು, ಬಾಬು ಗೌಡ ಆಳಕ್ಕೆದಡ್ಡ, ಶಾಲಾ ಸಹ ಶಿಕ್ಷಕಿ ಜಯಶ್ರೀ, ಗೌರವ ಶಿಕ್ಷಕಿ ಭವ್ಯ ಶ್ರೀ, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

LEAVE A REPLY

Please enter your comment!
Please enter your name here