ಇಂದಬೆಟ್ಟು ಕೋಯನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ

0

ಇಂದಬೆಟ್ಟು: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಚೇತನ ಸ್ತ್ರೀಶಕ್ತಿ ಸಂಘ, ಹಳೆ ವಿದ್ಯಾರ್ಥಿ ಸಂಘ, ಬಾಲ ವಿಕಾಸ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ಇಂದಬೆಟ್ಟು ಗ್ರಾಮದ ಕೋಯನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ನ.28ರಂದು ಕುಮಾರಿ ಖುಷಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್, ಜನಾಬ್ ಬಿ.ಹೆಚ್ ಅಬೂಬಕ್ಕರ್, ಸಾಮಾಜಿಕ ಕಾರ್ಯಕರ್ತ ಕೆ.ನೇಮಿರಾಜ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಅಶ್ವಿನಿ, ಕಡಿರುದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಾವಿತ್ರಿ, ಚೈಲ್ಡ್ ರೈಟ್ಸ್ ಟ್ರಸ್ಟ್ ತಾಲೂಕು ಸಂಯೋಜಕರಾದ ವಿನೋದ್ ಪ್ರಸಾದ್ ಕಲ್ಲಾಜೆ ಭಾಗವಹಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ, ಮಹಿಳೆಯರಿಗೆ, ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಬಹುಮಾನದ ಪ್ರಾಯೋಜಕತ್ವವನ್ನು ಬಿಫಾತಿಮಾ ಸಿದ್ದೀಕ್, ಹರೀಶ್ ಕುಮಾರ್ ಪಡೆಂಕಲ್, ಪದ್ಮನಾಭ ಗೌಡ ಕೊಪ್ಪದಗಂಡಿ ಹಾಗೂ ಹಳೆ ವಿದ್ಯಾರ್ಥಿಗಳು ವಹಿಸಿದ್ದರು.

ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ಬಾಲವಿಕಾಸ ಸಮಿತಿ ವತಿಯಿಂದ 25 ಮಕ್ಕಳ ಚಯರ್ ನೀಡಿದರು.ಸಂಶದ್ ಮಹಮ್ಮದ್ ಸಾಧಿಕ್ ಗೋಡೆ ಗಡಿಯಾರ ಕೊಡುಗೆ ನೀಡಿದರು. ಮಧ್ಯಾಹ್ನದ ಊಟದ ವ್ಯವಸ್ಥೆಗೆ ಬದ್ರುದ್ದೀನ್, ಸಿದ್ದೀಕ್ ಉಲ್ಲ ಅಕ್ಬರ್, ಬಿ. ಎಸ್ ಉಮರ್, ಮಹಮ್ಮದ್ ಅಶ್ರಫ್, ಚೇತನ, ವಿಜಯಲಕ್ಷ್ಮಿ, ಮಹಮ್ಮದ್ ಹಿಬಾತುಲ್ಲ, ಜಾಕೀರ್ ಹುಸೇನ್, ಆಶಾ ಕಾರ್ಯಕರ್ತೆ ರಜನಿ ಇವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಹಾಗೂ ಅಂಗನವಾಡಿ ಸಹಾಯಕಿ ಗುಲ್ಜಾರ್ ಬಿ ಯವರನ್ನು ಪೋಷಕರು, ಊರವರ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೇಮಿರಾಜ್ ಸ್ವಾಗತಿಸಿ ಶಶಿಕಲಾರವರು ಧನ್ಯವಾದ ಸಮರ್ಪಿಸಿದರು

p>

LEAVE A REPLY

Please enter your comment!
Please enter your name here