ಧರ್ಮಸ್ಥಳ: ಸೇವಾ ಭಾರತಿ ಕನ್ಯಾಡಿಯ 19 ನೇ ವರ್ಷದ ಸಂಭ್ರಮ, ಕೋಂಸ್ಕೊಪ್ ನಿಂದಕೇಂದ್ರ ಮತ್ತು ಸಮುದಾಯಕ್ಕೆ ಉಪಕರಣಗಳ ಹಸ್ತಾಂತರ ಮತ್ತು ವಿಶ್ವವಿಕಲ ಚೇತನರ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಡಿ.3 ರಂದು ಕೊಕ್ಕಡ ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನರಚೇತನ ಕೇಂದ್ರದಲ್ಲಿ ನಡೆಯಲಿದೆ ಎಂದು ಸೇವಾಧಾಮದ ಸಂಚಾಲಕ ಕೆ.ಪುರಂದರ ರಾವ್ ಮತ್ತು ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ ಹೇಳಿದರು.
ಅವರು ನ.28 ರಂದು ಕನ್ಯಾಡಿ ಸೇವಾ ಭಾರತಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸೇವಾ ಭಾರತಿ ಸಂಸ್ಥೆಯು 2004 ರಲ್ಲಿ ಸ್ಥಾಪಿತವಾದ ಸರ್ಕಾರೇತರ ಸಂಸ್ಥೆಯಾಗಿದ್ದು ಕಳೆದ 19 ವರ್ಷಗಳಿಂದ ಆರೋಗ್ಯ, ಮಹಿಳಾ ಸಬಲೀಕರಣ, ಸ್ವ-ಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರದಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗೂ ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತದೆ.ಆರೋಗ್ಯಂ ಯೋಜನೆಯಡಿ ರಕ್ತದಾನ ಶಿಬಿರಗಳನ್ನು ಹಾಗೂ ರಿಯಾಯಿತಿ ದರದಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ನೀಡುತ್ತದೆ. ಸಬಲಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸೇವಾಧಾಮ ಎಂಬ ಹೆಸರಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪುನಶ್ಚೇತನ ಕೇಂದ್ರವನ್ನು 2018 ರಲ್ಲಿ ಪ್ರಾರಂಭಿಸಿ, ಪುನಶ್ವೇತನ ನೀಡುವ ಕಾರ್ಯ ನಿರಂತರವಾಗಿ ಮುಂದುವರೆಯುತ್ತಿದೆ.2022-23ರ ಈ ಆರ್ಥಿಕ ವರ್ಷದಲ್ಲಿ ಮಹತ್ತರ ಬೆಳವಣಿಗೆಗಳು ಆಗಿವೆ.ಸಂಸ್ಥೆಯ ಸೇವಾವ್ಯಾಪ್ತಿಯನ್ನು ಹಿರಿದಾಗಿಸಿಕೊಂಡಿದೆ ಕರ್ನಾಟಕ ಸರಕಾರದ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಅಭಿವೃದ್ಧಿ ಇಲಾಖೆಯು ನಮ್ಮ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುವುದು. ಬೆಂಗಳೂರಿನ TCS 10K ಮ್ಯಾರಥಾನ್‌ನಲ್ಲಿ ಬಾಗವಹಿಸಿರುವುದು ಮಹತ್ತರ ಸಂಗತಿ.ಸಂಸ್ಥೆಯು 2022-23 ರಲ್ಲಿ 178 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, 31 ಮಂದಿ ದಿವ್ಯಾಂಗರನ್ನು ಪುನಶ್ಚೇತನಗೊಳಿಸಲಾಗಿದೆ.81 ಮಂದಿಗೆ ಗಾಲಿಕುರ್ಚಿ, ಹಾಗೂ 41 ಮಂದಿಗೆ ಜೀವನೋಪಾಯ ಸೌಲಭ್ಯಗಳನ್ನು ನೀಡಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಸೇವಾಧಾಮದ ಮೂಲಕ 5 ಜಿಲ್ಲೆಗಳಲ್ಲಿ ಸೇವೆ ನೀಡಿದ್ದು ಪ್ರಸ್ತುತ ವರ್ಷದಿಂದ ಜಿಲ್ಲೆಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.ಸೇವಾಭಾರತಿ 19 ವರ್ಷಗಳ ಸೇವೆಯನ್ನು ಪೂರೈಸಿ 20ನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸುಸಂದರ್ಭದಲ್ಲಿ ವಿವಿಧ ಸೇವಾಕಾರ್ಯಗಳ ಹಸ್ತಾಂತರ, ಹಾಗೂ ರಕ್ತದಾನ ಶಿಬಿರ ವಾರ್ಷಿಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೇವಾಧಾಮ ಪುನಶ್ವೇತನ ಕೇಂದ್ರದ 5ನೇ ವಾರ್ಷಿಕೋತ್ಸವದ ಪ್ರಯುಕ್ತ ರೋಟರಿ ಸೇವಾಭಾರತಿ ಜೀವರಕ್ಷಕ್ ಯೋಜನೆ ಆಶ್ರಯದಲ್ಲಿ ಮಂಗಳೂರು ರಕ್ತನಿಧಿ ವಿಭಾಗದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಸಹಕಾರದಲ್ಲಿ ವ್ಯವಸ್ಥಾಪನಾ ಸಮಿತಿ, ಶ್ರೀ ಮಹಾಗಣಪತಿ ದೇವಸ್ಥಾನ, ಸೌತಡ್ಕ, ಉಪ್ಪಿನಂಗಡಿ ಹವ್ಯಕ ಮಂಡಲ, ಉಜಿರೆ ವಲಯ, ಶಿವಾಜಿ ಗ್ರೂಪ್ ಆಫ್ ಬಾಯ್ಸ್,ಕೊಕ್ಕಡ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಕೊಕ್ಕಡ, ಕನ್ಯಾಡಿ ಫ್ರೆಂಡ್ಸ್ ಕ್ಲಬ್, ಕನ್ಯಾಡಿ II, ವೀರಕೇಸರಿ ಅನಾರು, ಪಟ್ರಮೆ, ಕೇಸರಿ ಗೆಳೆಯರ ಬಳಗ, ಕೊಕ್ಕಡ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ಕೊಕ್ಕಡ, ಸಮುದಾಯ ಆರೋಗ್ಯಕೇಂದ್ರ, ಕೊಕ್ಕಡ ಇವುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಹರೀಶ್ ರಾವ್ ಉದ್ಘಾಟಿಸಲಿದ್ದಾರೆ.ಉಜಿರೆ ಹವ್ಯಕ ವಲಯ ಅಧ್ಯಕ್ಷ ಶ್ಯಾಮ್ ಭಟ್ ಅತ್ತಾಜೆ, ಭಾರತೀಯ ಜೀವ ವಿಮಾ ನಿಗಮ, ಅಭಿವೃದ್ಧಿ ಅಧಿಕಾರಿ ಉದಯಶಂಕರ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಕೊಕ್ಕಡ ಅಧ್ಯಕ್ಷ ಕೆ ಕೃಷ್ಣ ಭಟ್, ಕೊಕ್ಕಡ ಆಡಳಿತ ವೈದ್ಯಾಧಿಕಾರಿಗಳು ಮತ್ತು ದಂತ ವೈದ್ಯಾಧಿಕಾರಿಗಳು, ಬೆಳ್ತಂಗಡಿ, ತಾಲೂಕು ವೈದ್ಯಾಧಿಕಾರಿಗಳು ಡಾ.ಪ್ರಕಾಶ್, ಡಾ.ತುಷಾರ ಕುಮಾರಿ, ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಅಧ್ಯಕ್ಷ ಕಿಶೋರ್, ವೀರಕೇಸರಿ ಅನಾರು ಪಟ್ರಮೆ ಅಧ್ಯಕ್ಷ ಮೋಹನ್ ಗೌಡ ಅಶ್ವತ್ಥಡಿ, ಕನ್ಯಾಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನವೀನ್ ಸುವರ್ಣ ಹಾಗೂ ಸಂಸ್ಥೆಯ ಪ್ರಮುಖರು ಭಾಗವಸಲಿದ್ದಾರೆ.
20ನೇ ವಾರ್ಷಿಕ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ, ಶ್ರೀಲತ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.), ಉಜಿರೆ ಸಂಚಾಲಕರು ಮೋಹನ್ ಕುಮಾರ್, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರೊ.ಅನಂತ ಭಟ್ ಮಚ್ಚಿಮಲೆ, ಕೊಕ್ಕಡ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ.ಕುಶಲಪ್ಪ ಗೌಡ, ಉಡುಪಿ ಧನ್ಯಲಕ್ಷ್ಮೀ ರೈಸ್ ಮಿಲ್, ಮಾಲೀಕ ಮಧ್ವಮೂರ್ತಿ ಪಿ, ಕೆನರಾ ಬ್ಯಾಂಕ್ ಕೊಕ್ಕಡ ಶಾಖೆ ಮ್ಯಾನೇಜರ್ ಅಂಕಿತ್ ಸಿಂಗ್, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಭಟ್ ಉಪಸ್ಥಿತರಿರುತ್ತಾರೆ.
ಬೆಂಗಳೂರಿನ ಕೋಮ್ ಸ್ಕೋಪ್ ಕಂಪೆನಿಯ ವೀರೇಂದ್ರ ಸಿಂಗ್, ನಿರ್ದೇಶಕರು ಸಾಫ್ಟ್ ವೇರ್ ಇಂಜಿನಿಯರಿಂಗ್, ಕೋಮ್ ಸ್ಕೋಪ್, ಶ್ರೀ ಮುರುಳಿ ಜಯರಾಮ್, ಸೀನಿಯರ್ ಮ್ಯಾನೇಜರ್, ಸಾಫ್ಟ್ ವೇರ್ ಇಂಜಿನಿಯರಿಂಗ್, ಕೋಮ್ ಸ್ಕೋಪ್, ನವೀನ್ ವಜ್ರವೇಲು, ಸೀನಿಯರ್ ಮ್ಯಾನೇಜರ್, ಟ್ರೇಡ್ ಕಂಪ್ಲೆಯನ್ಸ್, ಕೋಮ್ ಸ್ಕೋಪ್, ಚೇತನ್ ಕಾರೆ, ಸುಪವೈಸರ್, ಬುಸಿನೆಸ್ ಆಪರೇಶನ್, ಕೋಮ್ ಸ್ಕೋಪ್
ಭಾಗವಹಿಸಿಲಿದ್ದಾರೆ.
ಬೆಂಗಳೂರಿನ ಕೋಮ್ ಸ್ಕೋಪ್ ಕಂಪೆನಿಯು ಸಿ.ಎಸ್.ಆರ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ, ಗಾಳಿಹಾಸಿಗೆ, ನೀರಿನ ಹಾಸಿಗೆ, ಕಮೋಡೋ ಗಾಲಿಕುರ್ಚಿ, ನಿಯೋ ಬೋಲ್ಟ್ ವಿಥ್ ಪ್ರೈ, ಸೆಲ್ಫ್ಕೇರ್ ಕಿಟ್ ಹಾಗೂ ಮೆಡಿಕಲ್ ಕಿಟ್‌ಗಳನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೇವಾ ಭಾರತಿ ಸಂಸ್ಥೆಯ 10 ಸೆಂಟ್ಸ್ ಜಾಗದಲ್ಲಿ ಶೀಘ್ರದಲ್ಲಿ ಸೇವಾಧಾಮ ಕಟ್ಟಡ ನಿರ್ಮಾಣವಾಗಲಿದೆ ಎಂದು ಸೇವಾ ಭಾರತಿ ಸಂಸ್ಥಾಪಕ, ಸೇವಾಧಾಮದ ಖಜಾಂಜಿ ಕೆ.ವಿನಾಯಕ ರಾವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಬಾಲಕೃಷ್ಣ, ಉಪಸ್ಥಿತರಿದ್ದರು.