ಪ್ರೌಢಶಾಲಾ ಶಿಕ್ಷಕರಿಗೆ ಮೈಕ್ರೋಕೆಮೆಸ್ಟ್ರಿ ಲ್ಯಾಬ್ ಕಾರ್ಯಗಾರ

0

ಬೆಳ್ತಂಗಡಿ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ವಿಜ್ಞಾನ ಶಿಕ್ಷಕರ ವೇದಿಕೆ, ರಾಯಲ್ ಸೊಸೈಟಿ ಆಪ್ ಕೆಮೆಸ್ಟ್ರಿ ಕೇಂಬ್ರಿಡ್ಜ್ (ಯು.ಕೆ) ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇವರ ಸಹಯೋಗದೊಂದಿಗೆ ಪ್ರೌಢಶಾಲಾ ಶಿಕ್ಷಕರಿಗೆ ಮೈಕ್ರೋಕೆಮೆಸ್ಟ್ರಿ ಲ್ಯಾಬ್ ಎಂಬ ಕಾರ್ಯಗಾರ ನ.17ರಂದು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆಯಲ್ಲಿ ನಡೆಯಿತು.

ಎರಡು ದಿನಗಳ ಈ ಕಾರ್ಯಾಗಾರವನ್ನು ಎಕ್ಸೆಲ್‌ಪದವಿ ಪೂರ್ವ ಕಾಲೇಜು ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುರ ಮೂಲಕ ಉದ್ಘಾಟಿಸಿ ದೇಶ ಕಾಯುವ ಸೈನಿಕರನ್ನು ಮತ್ತು ಶಾಲೆಯ ಶಿಕ್ಷಕರನ್ನು ಸಮಾನವಾಗಿ ಕಾಣಬೇಕು ಏಕೆಂದರೆ ದೇಶಕ್ಕಾಗಿ ಸೈನಿಕರು ಮತ್ತು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಕರು ತಮ್ಮ ಸೇವೆಯನ್ನು ಮಾಡುತ್ತಿರುತ್ತಾರೆ.ವೈದ್ಯರು ನಿರಂತರ ಅಧ್ಯಯನದಿಂದ ರೋಗದಲಕ್ಷಣ ತಿಳಿದು ರೋಗಿಯನ್ನು ಶುಶ್ರುಷೆ ಮಾಡುತ್ತಿರುವಂತೆ ಶಿಕ್ಷಕರು ನಿರಂತರ ಅಧ್ಯನದಿಂದ ವಿದ್ಯಾರ್ಥಿಯ ಕಲಿಕಾ ಸಮಸ್ಯೆಯನ್ನು ನಿವಾರಿಸಬೇಕೆಂದರು ತಾರಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬೆಳ್ತಂಗಡಿ ಅಧ್ಯಕ್ಷತೆ ವಹಸಿ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆಯವರು ಎರಡು ದಿನಗಳ ತರಬೇತಿಯ ಸಂಪೂರ್ಣ ಜವಾಬ್ಧಾರಿಯನ್ನು ವಹಿಸಿಕೊಂಡು ತಮ್ಮ ಸಾಮಾಜಿಕ ಸೇವಾಕಾರ್ಯವನ್ನು ಮಾಡಿ ಇಲಾಖೆಗೆ ಸಹಕಾರ ನೀಡಿರುವುದಕ್ಕೆ ಇಲಾಖೆ ಅಭಾರಿಯಾಗಿದ್ದೇವೆ ಎಂದರು.

ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರಾಧಾಕೃಷ್ಣ ತಚಮ್ಮೆ ಸ್ವಾಗತಿಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಎಸ್.ವಿ.ಎಮ್ ಆರ್ಟ್ಸ್ , ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಇಳಕಲ್ ಬಾಗಲಕೋಟೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಡಾ|ಪಿ.ಎಸ್ ಕಂದಗಲ್ ಆಗಮಿಸಿದ್ದರು. ಹಿರಿಯ ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಮತ್ತು ತರಬೇತಿಯ ನೋಡಲ್ ಅಧಿಕಾರಿ ಶ್ರೀಮತಿ ಫಾತಿಮಾ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿದರು.

ಶಿಕ್ಷಕ ಯೋಗೀಶ್ ನಾಯಕ್ ಸ್ವಾಗತಿಸಿ, ಸಪ್ನಾರಾವ್ ನಿರೂಪಿಸಿದರು.ಮಹೇಂದ್ರಪೂಜಾರಿ ಸಹಕರಿಸಿದರು ಕಾಲೇಜು ಪ್ರಾಂಶುಪಾಲ ನವಿನ್ ಕುಮಾರ್ ಮರಿಕೆ, ಕ್ಯಾಂಪಸ್ ಮೆನೇಜರ್ ಶಾಂತಿರಾಜ್ ಜೈನ್, ಆಡಳಿತಾಧಿಕಾರಿ ಪುರುಷೋತ್ತಮ ಉಪಸ್ಥಿತರಿದ್ದರು.ಬೆಳ್ತಂಗಡಿ ಮತ್ತು ಮೂಡಬಿದ್ರೆ ತಾಲೂಕಿನ ಎಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ತರಬೇತಿಗೆ ಹಾಜರಾಗಿದ್ದರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಇಲ್ಲಿಯ ಪ್ರಾಂಶುಪಾಲೆ ರಾಜಲಕ್ಷ್ಮಿ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿ ಕೆ.ಎಸ್ ಕುಂದಗಲ್, ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್ ಮತ್ತು ನಿವೃತ್ತರಾಗಲಿರುವ ಸೇ.ಹಾ.ಪ್ರೌಢಶಾಲೆ ಮಡಂತ್ಯಾರು ಇಲ್ಲಿಯ ಶಿಕ್ಷಕಿ ಗ್ರೇಸಿ ಇವರನ್ನು ಗೌರವಿಸಲಾಯಿತು.

p>

LEAVE A REPLY

Please enter your comment!
Please enter your name here