

ಮಡಂತ್ಯಾರು: ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ನವೆಂಬರ್ 7ರಂದು ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯಿತು.
ಈ ವಸ್ತು ಪ್ರದರ್ಶನದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಹನ ಫಾತಿಮಾ ಮತ್ತು ದಿವ್ಯಶ್ರೀರವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ನಮ್ಮ ಶಾಲಾ ವಿಜ್ಞಾನ ಶಿಕ್ಷಕಿಯರಾದ ಕುಮಾರಿ ಪೂಜಶ್ರೀ, ಕುಮಾರಿ ರೀಮ ವೆರೊನ ರೊಡ್ರಿಗಸ್ ಮತ್ತು ಶ್ರೀಮತಿ ಸೌಮ್ಯರವರು ತರಬೇತಿಯನ್ನು ನೀಡಿರುತ್ತಾರೆ.