ಉಜಿರೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಎನ್.ಎಸ್.ಎಸ್ ಘಟಕ, ಯೋಜನಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಉಜಿರೆ: 2023 ನೇ ಸಾಲಿನ ಕರ್ನಾಟಕ ರಾಜ್ಯದ ಉತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ‘ರಾಜ್ಯ ಪ್ರಶಸ್ತಿ’ಯನ್ನು ಮೂಡಿಗೆರಿಸಿಕೊಂಡಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ)ಕಾಲೇಜು ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ, ನಿಕಟ ಪೂರ್ವ ಯೋಜನಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ್ ಕೆ.ಎಸ್ ಹಾಗೂ ಘಟಕದ ಪರವಾಗಿ ಪ್ರಶಸ್ತಿಯನ್ನ ಸ್ವೀಕರಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ ಹೆಗ್ಡೆ ಇವರನ್ನು ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವು ನ.8ರಂದು ಸಮ್ಯಗ್ದರ್ಶನ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಲಕ್ಷ್ಮೀನಾರಾಯಣ ಕೆ.ಎಸ್ ಮಾತನಾಡಿ,“ಪ್ರಶಸ್ತಿ ಪಡೆದು ಕಾಲೇಜಿಗೆ ಮರಳಿದ ದಿನ ನೀವೆಲ್ಲರೂ ನಮಲ್ಲಿ ತೋರಿದ ಅಭಿಮಾನಕ್ಕೆ ನಾನು ಎಂದಿಗೂ ಚಿರಋಣಿ.ಜೀವನದಲ್ಲಿ ಸದಾ ಮುನ್ನಡೆಯಲು ಸರಿಯಾದ ತಯಾರಿ ಮತ್ತು ಕೆಲಸದಲ್ಲಿ ನಮ್ಮ ನಿಷ್ಟೆ ತುಂಬಾ ಮುಖ್ಯವಾಗುತ್ತದೆ.ಎನ್.ಎಸ್.ಎಸ್ ನಲ್ಲಿ ಕೆಲಸ ಮಾಡಿದ ಎಲ್ಲಾ ಕ್ಷಣಗಳು ನನ್ನ ಪಾಲಿಗೆ ತುಂಬಾ ಒಳ್ಳೆಯ ಕ್ಷಣಗಳು”ಎಂದು ತಮ್ಮ ಜೊತೆ ಕೆಲಸ ಮಾಡಿದ ಎಲ್ಲಾ ಯೋಜನಾಧಿಕಾರಿಗಳನ್ನ ನೆನೆದರು.ಮಾತ್ರವಲ್ಲದೇ ಎನ್ ಎಸ್ ಎಸ್ ಗಾಗಿ ನಾನು ಎಂದಿಗೂ ಯಾವ ಸಹಾಯ ಮಾಡಲು ಸಿದ್ಧನಿದ್ದೇನೆ,ಎಂದೆಂದಿಗೂ ನಾನು ಕೂಡ ಒಬ್ಬ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಎಂಬುವುದಾಗಿ ಹೇಳಿದರು.

ಡಾ.ಬಿ.ಎ ಕುಮಾರ ಹೆಗ್ಡೆ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ,”ಎನ್.ಎಸ್.ಎಸ್ ಎಂಬುವುದು ಜೀವನಲ್ಲಿ ಆತ್ಮಸ್ಥೈರ್ಯ ವನ್ನು ಒದಗಿಸುತ್ತದೆ ಮತ್ತು ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ.ಸ್ವಯಂ ಸೇವಕರು ಅವಕಾಶಗಳನ್ನ ತಮ್ಮದಾಗಿಸಿಕೊಂಡ ಮುನ್ನುಗ್ಗಬೇಕು”ಎಂದು ಕಿವಿಮಾತನ್ನು ನೀಡಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಪ್ರೊ.ದೀಪ.ಆರ್.ಪಿ ಶುಭಕೋರಿದರು.ಡಾ.ಮಹೇಶ್ ಕುಮಾರ್ ಶೆಟ್ಟಿ ಹಚ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಸ್ವಯಂಸೇವಕಿ ರಚನಾ ವಂದಿಸಿ,ಶ್ವೇತಾ ನಿರೂಪಿಸಿದರು.

LEAVE A REPLY

Please enter your comment!
Please enter your name here