ಲಾಯಿಲ: ಬಜಕ್ರೆಸಾಲು ಸೇತುವೆಯ ಬಳಿ ದನದ ಚರ್ಮ ಪತ್ತೆ

0

ಲಾಯಿಲ: ಲಾಯಿಲ ಗ್ರಾಮದ ಬಜಕ್ರೆಸಾಲು ಸೇತುವೆಯ ಕೆಳಗೆ ನದಿಯಲ್ಲಿ ದನದ ಚರ್ಮ ಪತ್ತೆಯಾಗಿದೆ.ಸ್ಥಳೀಯರು ಈ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಕೆಟ್ಟ ವಾಸನೆ ಬರುತಿದ್ದು, ಈ ಬಗ್ಗೆ ಗಮನಿಸಿದಾಗ ದನದ ಕಿವಿ ಸಹಿತ ಚರ್ಮ ಪತ್ತೆಯಾಗಿದೆ.ಇದರ ಸಮೀಪದಲ್ಲೇ ನಾಗ ಬನವೊಂದು ಕೂಡ ಇದೆ.

ಈಗಾಗಲೇ ಪೊಲೀಸ್ ಹಾಗೂ ಪಂಚಾಯತ್‌ಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.ಯಾರೋ ಕಿಡಿಗೇಡಿಗಳು ದನದ ಮಾಂಸ ಮಾಡಿ ಉಳಿದ ಚರ್ಮ ಸೇರಿದಂತೆ ತ್ಯಾಜ್ಯವನ್ನು ಸೇತುವೆ ಮೇಲಿನಿಂದ ನದಿಗೆ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಸವಣಾಲು ರಸ್ತೆ ಬದಿ ಚರಂಡಿಯಲ್ಲಿ ಮೂರು ಪ್ಲಾಸ್ಟಿಕ್ ಗೋಣಿಯಲ್ಲಿ ಇದೇ ರೀತಿ ತ್ಯಾಜ್ಯ ಕಂಡು ಬಂದಿದೆ.ಎಲ್ಲೋ ಗೋ ಮಾಂಸ ಮಾಡಿ ಉಳಿದ ತ್ಯಾಜ್ಯವನ್ನು ಜನ ಸಂಚಾರ ಕಡಿಮೆ ಇರುವ ಸ್ಥಳಗಳಲ್ಲಿ ರಾತ್ರಿ ಸಮಯದಲ್ಲಿ ಬಿಸಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.

LEAVE A REPLY

Please enter your comment!
Please enter your name here