ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1991ರಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಪ್ರಾರಂಭಗೊಂಡು ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ನೀಡಲಾಗುತ್ತಿದೆ.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಪೀಠೋಪಕರಣಗಳ ಕೊರತೆಯಿರುವ ಸರಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚ್‌ಗಳನ್ನು ನೀಡಲಾಗುತ್ತಿದೆ.ಪ್ರಸ್ತುತ ಫೈಬರ್ ಮಾದರಿಯ ಡೆಸ್ಕ್ ಬೆಂಚ್ ಗಳನ್ನು ಪೂರೈಕೆ ಮಾಡುತ್ತಿದ್ದು, ಅಧಿಕ ಬಾಳಿಕೆ ಹಾಗೂ ಕಡಿಮೆ ಭಾರವನ್ನು ಹೊಂದಿರುತ್ತದೆ.ಅನೇಕ ಗಾಮೀಣ ಶಾಲೆಗಳಲ್ಲಿ ಡೆಸ್ಕ್ ಬೆಂಚುಗಳ ಕೊರತೆಯನ್ನು ಗಮನಿಸಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಯೋಜನೆಯ ವತಿಯಿಂದ ಈ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
ಇದರಂತೆ ಶಾಲೆಗಳಿಗೆ 5 ರಿಂದ ಗರಿಷ್ಟ 10 ಜೊತೆ ಡೆಸ್ಕ್ ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಶೇ.20ರಷ್ಟು ಮೊತ್ತವನ್ನು ಶಾಲಾಭಿವೃದ್ಧಿ ಸಮಿತಿಗಳು ಭರಿಸಿದರೆ ಉಳಿದ ಶೇ.80 ರಷ್ಟು ಮೊತ್ತವನ್ನು ಕ್ಷೇತ್ರದಿಂದ ಭರಿಸಲಾಗುತ್ತಿದೆ.
ಪ್ರಸ್ತುತ ವರ್ಷ ರಾಜ್ಯದ ಹಾಸನ, ಮಂಡ್ಯ, ಮೈಸೂರು, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಯ ವಿವಿಧ ತಾಲೂಕುಗಳ 404 ಶಾಲೆಗಳಿಗೆ 3,472 ಜೊತೆ ಡೆಸ್ಕ್- ಬೆಂಚ್‌ಗಳನ್ನು ನ.4 ರಂದು ಧರ್ಮಸ್ಥಳದಲ್ಲಿ ಸಂಕೇತಿಕವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಸ್ತಾಂತರ ಮಾಡಿದರು.ಪ್ರಸ್ತುತ ವರ್ಷ 5 ಜಿಲ್ಲೆಯ 404 ಶಾಲೆಗಳಿಗೆ 3472 ಜೊತೆ ಡೆಸ್ಕ್ ಬೆಂಚನ್ನು ಪೂರೈಕೆ ಮಾಡಲಾಗುತ್ತಿದ್ದು, ಒಟ್ಟು ರೂ 2.50 ಕೋಟಿ ಮೊತ್ತ ವಿನಿಯೋಗಿಸಲಾಗುತ್ತಿದೆ.ಇದರಿಂದಾಗಿ ಸುಮಾರು 18,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಡೆಸ್ಕ್ ಬೆಂಚು ವಿತರಣೆಗೆ ಸಾಂಕೇತಿಕವಾಗಿ ಹಸಿರು ನಿಶಾನೆಯನ್ನು ಡಾ|| ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಡಾ|| ಹೇಮಾವತಿ ವೀ ಹೆಗ್ಗಡೆಯವರು ನೀಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಶಾಂತರಾಮ್ ಆರ್.ಪೈ, ಪ್ರಾದೇಶಿಕ ಹಣಕಾಸು ನಿರ್ದೇಶಕರು
ಆನಂದ ಸುವರ್ಣ, ಪ್ರಾದೇಶಿಕ ನಿರ್ದೇಶಕರು – ಸಮುದಾಯ ಅಭಿವೃದ್ಧಿ ವಿಭಾಗ, ಮೋಹನ್ ಕುಮಾರ್, ಮಾಲಕರು – ಲಕ್ಷ್ಮೀ ಇಂಡಸ್ಟ್ರೀಸ್, ಉಜಿರೆ, ಸುಂದರ ಗೌಡ ಇಚ್ಚಿಲ, ಮಾಲಕರು- ಚಿನ್ಮಯಿ ಇಂಡಸ್ಟ್ರೀಸ್,
ಪುಷ್ಪರಾಜ್, ತಾಂತ್ರಿಕ ಯೋಜನಾಧಿಕಾರಿಗಳು – ಸಮುದಾಯ ಅಭಿವೃದ್ಧಿ ವಿಭಾಗ, ಶೇಖರ್ ವೈ, ಯೋಜನಾಧಿಕಾರಿಗಳು – ಸಮುದಾಯ ಅಭಿವೃದ್ಧಿ ವಿಭಾಗ ಮತ್ತು ಸಮುದಾಯ ಅಭಿವೃದ್ಧಿ ವಿಭಾಗದ ಪ್ರಬಂಧಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.