ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶ- ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಪ್ರಶಾಂತ್ ಪ್ರತಿಮಾ ನಿಲಯ, ಪ್ರ.ಕಾರ್ಯದರ್ಶಿಯಾಗಿ ರವಿರಾಜ್ ಗೌಡ ಆಯ್ಕೆ

0

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಶಿರ್ಲಾಲು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಗ್ರಾಮಸ್ಥರ ಸಭೆ ದೇವಸ್ಥಾನದ ಸಭಾಂಗಣದಲ್ಲಿ ಅ.29 ರಂದು ನಡೆಯಿತು.

ಸಭೆಯಲ್ಲಿ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಣೆ ಮಾಡಿ ಇದೇ ಬರುವ ಡಿಸೆಂಬರ್ 24 ರಿಂದ 28 ರವರೆಗೆ ನಡೆಸುವುದೆಂದು ತಿಳಿಸಲಾಯಿತು.

ಸಭೆಯಲ್ಲಿ ಬ್ರಹ್ಮಕಲಶೊತ್ಸವದ ಸಮಿತಿಗೆ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರ ಆಯ್ಕೆ ನಡೆಯಿತು.ಬ್ರಹ್ಮಕಲಶೋತ್ಸವದ ಸಮಿತಿ ಗೌರವಾದ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಸಂಘಟಕ ಪ್ರಶಾಂತ್ ಎಂ ಪಾರೆಂಕಿ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಶಿಕ್ಷಕ ರವಿರಾಜ್ ಗೌಡ ಕುಲ್ಯರೋಟ್ಟು ಆಯ್ಕೆಯಾದರು.ಇದೇ ವೇಳೆ ವಿವಿಧ ಸಮಿತಿಗಳ ಸಂಚಾಲಕರ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here