ಮೈರಲ್ಕೆ: ದೇವಸ್ಥಾನ ಮಠ ಮಂದಿಗಳಲ್ಲಿ ಭಕ್ತರೀಗೆ ಸಂಸ್ಕಾರ ಸಂಸ್ಕೃತಿ ತಿಳಿಸುವಂತಹ ಕೆಲಸವಾಗಬೇಕು ಸಂಸ್ಕಾರ ಈ ಸಮಯದಲ್ಲಿ ಉಳಿದಿದ್ರೆ ಅದು ಕನ್ನಡ ಮಾದ್ಯಮದಲ್ಲಿ ಮಾತ್ರ ಮಕ್ಕಳೀಗೆ ಧಾರ್ಮಿಕ ವಿಚಾರವನ್ನು ತಿಳಿಸುವ ಹೆತ್ತವರ ಕರ್ತವ್ಯವಾಗಿದೆ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮಿಜಿ ನುಡಿದರು.
ಅವರು ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇದಸ್ಥಾನ ಶ್ರೀ ರಾಮ ನಗರ ಮೈರಲ್ಕೆಯಲ್ಲಿ ಜರಗಿದ ಪ್ರಥಮ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶಶಿಧರ ಶೆಟ್ಟಿ ಉದ್ಯಮಿಗಳು ತುಳು ಸಂಘ ಬರೋಡಾ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪಾರೆಂಕಿ ಆಗಮಿಸಿದ್ದರು.ವೇದಿಕೆಯಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ನಿತೇಶ್ ಕೆ ಓಡಿಲ್ನಾಳ, ಗೌರವಾಧ್ಯಕ್ಷ ರಾಮಣ್ಣ ಕುಲಾಲ್ ಕೋಲಾಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುದೀಪ್ ಶೆಟ್ಟಿ ಸ್ವಾಗತಿಸಿ, ಮಹೇಶ್ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.ನಿತೇಶ್ ಕೆ ದನ್ಯವಾದ ವಿತ್ತರು.
ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಶಾರದಾ ದೇವಿಯ ಪ್ರತಿಷ್ಠಾಪನೆ ಮಹಾಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಿದ್ದ ಕಲಾವಿದರಿಂದ ತಾಳಮದ್ದಳೆ ಜರಗಿತು.