ಉಜಿರೆ: ಎಸ್.ಡಿ.ಎಂ ಬಿ.ಇಡಿ ಕಾಲೇಜಿನಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ

0

ಉಜಿರೆ: ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಇದರ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ 3 ದಿನದ ಪೌರತ್ವ ತರಬೇತಿ ಶಿಬಿರವನ್ನು ಅ.17ರಿಂದ ಅ.19ರವರೆಗೆ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಶರತ್‌ಕೃಷ್ಣ ಪಡ್ವೆಟ್ನಾಯ, ಅನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಜನಾರ್ಧನ ದೇವಸ್ಥಾನ, ಉಜಿರೆ ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಮೂಲ ಉದ್ದೇಶ.ಜಗತ್ತನ್ನು ಬದಲಾವಣೆ ಮಾಡುವ ಮೊದಲು ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸತೀಶ್ವಂದ್ರ ಎಸ್, ಕಾರ್ಯದರ್ಶಿಗಳು, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ, ಉಜಿರೆ ಇವರು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಶಾಲಾ ಕಲಿಕೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವಲ್ಲ ನಮ್ಮ ಸುತ್ತಮುತ್ತಲಿನ ಸಮಾಜವು ಶಿಕ್ಷಣ ಕ್ಷೇತ್ರವೇ.ಇಲ್ಲಿ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದರು.ಶ್ರೀ ಧ.ಮಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಶ್ರೀ ಬಿ ಸೋಮಶೇಖರ ಶೆಟ್ಟಿ, ರತ್ನಮಾನಸದ ನಿಲಯಪಾಲಕರಾದ ಶ್ರೀ ಯತೀಶ್ ಕೆ ಬಳಂಜ, ಶಿಬಿರಾಧಿಕಾರಿ ಶ್ರೀ ತಿರುಮಲೇಶ್ ರಾವ್ ಎನ್ ಕೆ, ಎಲ್ಲಾ ಉಪನ್ಯಾಸಕರುಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಮಂಜುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

p>

LEAVE A REPLY

Please enter your comment!
Please enter your name here