ಮಹಾಮಸ್ತಕಾಭಿಷೇಕದ ನೋಡಲ್ ಅಧಿಕಾರಿಯಾಗಿ ಮಾಣಿಕ್ಯ, ಸಮನ್ವಯ ಅಧಿಕಾರಿಯಾಗಿ ಕೆ.ಜಯಕೀರ್ತಿ ಜೈನ್ ನೇಮಕ

0

ಬೆಳ್ತಂಗಡಿ: ವೇಣೂರಿನಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಆಚರಣೆ ಸಂಬಂಧ ನೋಡಲ್ ಅಧಿಕಾರಿಯಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಮತ್ತು ಸಮನ್ವಯ ಅಧಿಕಾರಿಯಾಗಿ ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ.ಜಯಕೀರ್ತಿ ಜೈನ್‌ರವರನ್ನು ನೇಮಕ ಮಾಡಲಾಗಿದೆ.ಮಹಾಮಸ್ತಕಾಭಿಷೇಕ ಮಹೋತ್ಸವ-2024 ಆಚರಣೆ ಸಂಬಂಧ ಅ.5ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯ ನಡವಳಿ ಪ್ರಕಾರ ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.

ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ 22-02-2024ರಿಂದ 01-03-2024ರವರೆಗೆ ನಡೆಯಲಿದೆ. ಆ ಪ್ರಯುಕ್ತ ನಡೆದ ಸಭೆಯ ನಡವಳಿಯಂತೆ ಸದ್ರಿ ಕಾರ್ಯಕ್ರಮದ ಸುಸೂತ್ರ ನಿರ್ವಹಣೆಗಾಗಿ ಮಾಣಿಕ್ಯ, ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ದ.ಕ.ಮಂಗಳೂರು ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ಕೆ.ಜಯಕೀರ್ತಿ ಜೈನ್ ಜಾನುವಾರು ಅಭಿವೃದ್ಧಿ ಅಧಿಕಾರಿಯವರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ.

22-02-2024ರಿಂದ 01-03-2024ರವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ 2024 ಕಾರ್ಯಕ್ರಮದ ಸುಸೂತ್ರ ನಿರ್ವಹಣೆಗಾಗಿ ಇವರನ್ನು ನೇಮಕ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here