ಮಲೆಬೆಟ್ಟು: ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವಕ್ಕೆ ಚಾಲನೆ

0

ಮಲೆಬೆಟ್ಟು: ಶ್ರೀ ವನದುರ್ಗಾ ದೇವಾಲಯ ಬದಿನಡೆ, ಮಲೆಬೆಟ್ಟು ಶ್ರೀ ದೇವಿಯ ಸನ್ನಿಧಾನದಲ್ಲಿ ಅ.15ರಿಂದ 24ರ ವರೆಗೆ ನವರಾತ್ರಿ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.15 ಬೆಳಿಗ್ಗೆ ಗಂಟೆ 8-00ಕ್ಕೆ ಗಣಹೋಮ, ರಾತ್ರಿ 7-30ರಿಂದ ನವರಾತ್ರಿ ಪೂಜೆ, ಶ್ರೀರಂಗ ಪೂಜೆ, ಕುಣಿತ ಭಜನಾ ಕಾರ್ಯಕ್ರಮ ಶ್ರೀರಾಮ ಭಜನಾ ಮಂಡಳಿ, ಮಲೆಬೆಟ್ಟು ಇವರಿಂದ, ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಅ.16 ರಾತ್ರಿ 7.30ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ಕಾವ್ಯ ರಸಾಸ್ವಾದನೆ, ರಾತ್ರಿ ಮಂಗಳಾರತಿ, ಪ್ರಸಾದ ವಿತರಣ ಅ.17 ಮ.ಗಂಟೆ 12-30ರಿಂದ ಸಂಕ್ರಮಣ ಪೂಜೆ, ಅನ್ನಸಂತರ್ಪಣೆ ರಾತ್ರಿ 7.30ರಿಂದ ನವರಾತ್ರಿ ಪೂಜೆ, ಶ್ರೀರಂಗ ಪೂಜೆ, ರಾತ್ರಿ 9ರಿಂದ ಮಂಗಳಾರತಿ, ಪ್ರಸಾದ ವಿತರಣೆ, ಅ.18 ರಾತ್ರಿ ಗಂಟೆ 7.30ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ ಶ್ರೀ ರಾತ್ರಿ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅ.19 ರಾತ್ರಿ 7.30ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ರಾತ್ರಿ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅ.20 ರಾತ್ರಿ ಗಂಟೆ 7.30ರಿಂದ ಹರಿಕಥೆ-ಶ್ರೀಕೃಷ್ಣಭಕ್ತಿ,
ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ರಾತ್ರಿ ಗಂಟೆ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅ.21ರಾತ್ರಿ ಗಂಟೆ 7.30ರಿಂದ ಧರ್ಮ ಸಂರಕ್ಷಕ ಕೃಷ್ಣ-ಗಮಕ ಕಾರ್ಯಕ್ರಮ, ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ರಾತ್ರಿ ಗಂಟೆ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ ನೀರಕಜೆ, ಅ.22 ರಾತ್ರಿ ಗಂಟೆ 7.30ರಿಂದ ನವರಾತ್ರಿ ಪೂಜೆ, ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ,ಅ 23 ರಾತ್ರಿ ಗಂಟೆ 7.30ರಿಂದ ನವರಾತ್ರಿ ಪೂಜೆ, ಭಕ್ತಿಗೀತೆ/ಭಜನಾ ಸ್ಪರ್ಧೆ 5ನೇ ತರಗತಿಯವರೆಗಿನ ಮಕ್ಕಳಿಗೆ, 10ನೇ ತರಗತಿಯವರೆಗಿನ ಮಕ್ಕಳಿಗೆ ಮತ್ತು ಸಾರ್ವ ಜನಿಕರಿಗೆ, ರಾತ್ರಿ ಗಂಟೆ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅ.24 ‘ವಿಜಯ ದಶಮಿ’, ಪೂ.ಗಂಟೆ 10.00ರಿಂದ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಯಕ್ಷಗಾನ ತಾಳಮದ್ದಳೆ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ, ಅದೂರುಪೆರಾಲು ಮತ್ತು ಅತಿಥಿ ಕಲಾವಿದರಿಂದ ಪೂ. ಗಂಟೆ 11ಕ್ಕೆ ಶಾರದಾ ಪೂಜೆ, ವಾಹನ ಪೂಜೆ,ಮ, ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here