ಉಜಿರೆ: 2023-24ನೇ ಸಾಲಿನ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ, 2021-22ನೇ ಸಾಲಿನಲ್ಲಿ ಉತ್ತಮ ಸಾಧನೆಗೈದು ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತ್ ಗಳು ಕರ್ನಾಟಕದ ಇನ್ನೊಂದು ಉತ್ತಮ ಸಾಧನೆಗೈದ ಗಾಂಧಿ ಗ್ರಾಮ ಪುರಸ್ಕೃತ ಗ್ರಾಮ ಪಂಚಾಯತ್ ಭೇಟಿ ನೀಡಿ, ಅಲ್ಲಿನ ಉತ್ತಮ ಕಾರ್ಯಸಾಧನೆಗೆ ಅನುಸರಿಸಿದ ಕಾರ್ಯತಂತ್ರಗಳನ್ನು ಅಧ್ಯಯನ ಮಾಡಲು ಕರ್ನಾಟಕ ರಾಜ್ಯ ಸರಕಾರವು ಪರಸ್ಪರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿರುತ್ತದೆ.
ಅದರಂತೆ, ಈ ಕಾರ್ಯಕ್ರಮ ದಡಿ 2021-22 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕೃತ ಉಜಿರೆ ಗ್ರಾಮ ಪಂಚಾಯತ್ ನಿಂದ ಬೀದರ್ ಜಿಲ್ಲೆ ಕನಕನಗರ ತಾಲೂಕು ಠಾಣಾ ಖುಶ್ನೂರು ಗ್ರಾಮ ಪಂಚಾಯತ್ ಗೆ ಅ.10 ಮತ್ತು 11ರಂದು ಭೇಟಿ ನೀಡಿದರು.
ಈ ಪ್ರವಾಸದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್ ಕುಮಾರ್ , ಠಾಣಾ ಖುಶ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಕಾಶೀನಾಥ ಸಂಗಪ್ಪಾ ಜೀರಗೆ, ಉಪಾಧ್ಯಕ್ಷರು ದುರಾಣಿ ಶಮಾ ಬೇಗಂ ಅಬ್ದುಲ್ಲಾ ಮತ್ತು ಸದಸ್ಯರು, ಪಿಡಿಒ ಮನೋಹರ್, ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.