


ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಇಚ್ಚಿಲಂಪಾಡಿ ಲಿಟಿಲ್ ಫ್ಲವರ್ ಚರ್ಚ್ ವತಿಯಿಂದ ಅ.08ರಂದು ಬೆಳ್ತಂಗಡಿ ಧರ್ಮಾದ್ಯಕ್ಷರಾದ ಅತಿ ವಂದನಿಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಇವರನ್ನು ಇಚ್ಚಿಲಂಪಾಡಿ ನಾಗರಿಕರ ವತಿಯಿಂದ ಧರ್ಮಾಧ್ಯಕ್ಷ ಪೀಠಾರೋಹಣ ದೀಕ್ಷೆಯ ರಜತ ಮಹೋತ್ಸವದ ಅಂಗವಾಗಿ ಗೌರವ ಸೂಚಿಸಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮ ಗುರುಗಳು, ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಆದ ವಂದನಿಯ ಶಾಜಿ ಮಾತ್ಯು ಧರ್ಮ ಪ್ರಾಂತ್ಯದ ಪ್ರಾರಂಭದಿಂದ ಇಲ್ಲಿಯ ವರೆಗೆ ನಡೆದು ಬಂದ ಸಾಧನೆ ಹಾದಿಯ ಕಿರು ಪರಿಚಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಚರ್ಚ್ ನ ನಾಲ್ವರು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸ್ವೀಕರಣೆ ವಿಧಿಯನ್ನು ಪರಮ ಪೂಜ್ಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮ ಪ್ರಾಂತ್ಯ ದ ಚಾನ್ಸಲರ್ ವಂದನಿಯ ಫಾ.ಲಾರೆನ್ಸ್ ಪೂಣೊಲಿಲ್, ಸಹ ಧರ್ಮ ಗುರುಗಳಾದ ಫಾ.ಬಿಪಿನ್, ಚರ್ಚ್ ನ ಪಾಲನಾ ಸಮಿತಿ ಸದಸ್ಯರಾದ ತಂಬಿ, ಜೈಸನ್, ಶ್ರೀ ಶ್ರೀ ಜೋನಿ, ಶೈನ್.ಪಿ.ಜೋನ್, ಪ್ರಕಾಶ್, ಪ್ರಿನ್ಸ್, ಎಲಿಯಾಸ್, ತೋಮಸ್ ಮೊದಲಾದವರು ಉಪಸ್ಥಿತರಿದ್ದರು.