

ಚಾರ್ಮಾಡಿ: ಇಲ್ಲಿನ ಪಾಂಡಿಕಟ್ಟೆ ಇಬ್ರಾಹಿಂ ಶಾಂತಿಗುಡ್ಡೆಯವರ ಮನೆಗೆ ಇವತ್ತು ಸಿಡಿಲು ಬಡಿದ ಪರಿಣಾಮ ಅಪಾರ ಹಾನಿಯಾಗಿದೆ.

ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸುಟ್ಟಿವೆ.ಅಷ್ಟೇ ಅಲ್ಲದೇ, ಮನೆಯ ಮೇಲ್ಛಾವಣಿಗೂ ಹಾನಿಯಾಗಿದೆ.
ಸಿಡಿಲು ಮನೆಗೆ ಬಡಿದ ವೇಳೆ ಮನೆಯ ಸದಸ್ಯರು ಮನೆಯಲ್ಲೇ ಇದ್ದರು ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ.
ಸಿಡಿಲು ಬಡಿದ ಮನೆಗೆ ಸ್ಥಳೀಯರು ಭೇಟಿಯಾಗಿ ಮನೆಯವರಿಗೆ ಧೈರ್ಯ ತುಂಬುತ್ತಿದ್ದಾರೆ.