ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದ ನಿಯಮಾವಳಿಯಂತೆ ಕಾರ್ಯಾಚರಿಸುವ ದಾರ್ಮಿಕ ಶಿಕ್ಷಣ ಸಂಸ್ಥೆಯಾದ ಹಿದಾಯತುಸ್ಸಿಬಿಯಾನ್ ಮದರಸದ ಶಿಕ್ಷಕ – ರಕ್ಷಕರ ಸಭೆಯು ಮದರಸದಲ್ಲಿ ಅ.07 ರಂದು ನಡೆಯಿತು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ವಹಿಸಿದ್ದರು.
ಖತೀಬರಾದ ತಾಜುದ್ದೀನ್ ಸಖಾಫಿ ಉದ್ಘಾಟಿಸಿದರು.ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಮುಈನಿ ವಿಷಯ ಮಂಡಿಸಿದರು. ಹಸೈನಾರ್ ಸಅದಿ ಸ್ವಾಗತಿಸಿದರು. ಮುಅಲ್ಲಿಮರಾದ ಅಬ್ಬಾಸ್ ಹಿಶಾಮಿ,ಕಾರ್ಯದರ್ಶಿ ಅಬ್ದುಲ್ ಕರೀಮ್, ಅಬ್ದುಲ್ ಖಾದರ್ ಜಿ,ಅಬೂಸಾಲಿಹ್ ಮುಳ್ಳಗುಡ್ಡೆ,ಹನೀಫ್ ಬಿ.ಐ., ಆದಂ ಹಾಜಿ ಬಿ.ಎಂ. ಉಪಸ್ಥಿತರಿದ್ದರು.ಮದರಸ ಅಭಿವೃದ್ಧಿಯ ಬಗ್ಗೆ ಪೋಷಕರು ಅಭಿಪ್ರಾಯ ತಿಳಿಸಿದರು.
ಕಳೆದ ಸಾಲಿನ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ 5,7,10,+2 ಮಕ್ಕಳು ರೇಂಜ್ ಮಟ್ಟದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು,ಅದೇ ಪ್ರಕಾರ ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಇನ್ನಷ್ಟು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಈಗಿಂದಲೇ ಕಾರ್ಯಪ್ರವೃತ್ತರಾಗೋಣ ಎಂಬ ಸಲಹೆ ಸೂಚನೆ ನೀಡಿದರು.
ಮದರಸದ ಆಡಳಿತಾತ್ಮಕ ವ್ಯವಸ್ಥೆಗಾಗಿ ಮಕ್ಕಳಿಗೆ ಕೆಲವು ನಿಯಮ ನಿಬಂದನೆಗಳನ್ನು ರೂಪಿಸಬೇಕೆಂಬ ರಕ್ಷಕರಿಂದ ಅಭಿಪ್ರಾಯ ವ್ಯಕ್ತಪಡಿಸಿದರು.ಇದನ್ನು ಕಡ್ಡಾಯವಾಗಿ ಸಮಿತಿ ತೀರ್ಮಾನಿಸಬೇಕೆಂದು ತಿಳಿಸಿದರು.
ಕೊನೆಯಲ್ಲಿ ದುವಾ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.