ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟ ಸಭೆ- ಅ.29ರಂದು ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್‌ದ ಗೊಬ್ಬು ಗ್ರಾಮೀಣ ಸೊಗಡಿನ ಕ್ರೀಡಾಕೂಟ

0

ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟ ಬೆಳ್ತಂಗಡಿ ಇದರ ಸಭೆ ಅ.1ರಂದು ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ಸಭಾ ಭವನದಲ್ಲಿ ಒಕ್ಕೂಟದ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಉಜಿರೆ ಮುಂಡತ್ತೋಡಿ ಚಾವಡಿ ಬೈಲಿನಲ್ಲಿ ಅಕ್ಟೋಬರ್ 29ರಂದು ನಡೆಯುವ ಕೆಸರ್‌ದ ಗೊಬ್ಬು ಗ್ರಾಮೀಣ ಸೊಗಡಿನ ಕ್ರೀಡಾ ಕೂಟದ ವ್ಯವಸ್ಥೆಗಳ ರೂಪು ರೇಷೆಗಳ ಕುರಿತಾಗಿ ಚರ್ಚಿಸುತ್ತಾ ತಾಲೂಕಿನ ಶಾಸಕರು ಉದ್ಘಾಟಕರಾಗಿ, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರುಗಳು, ವಿವಿಧ ರಾಜಕೀಯ ಪಕ್ಷದ ಅದ್ಯಕ್ಷರುಗಳು, ಹಾಗೂ ದಾನಿಗಳು, ಕ್ರೀಡಾ ಪ್ರೋತ್ಸಾಹಕರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದು, ಪೂರ್ವಾಹ್ನ ಗಂಟೆ 9ಕ್ಕೆ ಪೆರ್ಲ ಮುಂಡತ್ತೋಡಿ ಕ್ರಾಸ್ ರಸ್ತೆಯಿಂದ ಕ್ರೀಡಾ ಗದ್ದೆಯವರೆಗೆ ತಾಲೂಕಿನ ವಿವಿದೆಡೆಯಿಂದ ಆಗಮಿಸುವ ಕ್ರೀಡಾ ಪಟುಗಳ ಭವ್ಯ ಮೆರವಣಿಗೆ ಸಾಗಿ ಬರಲಿದೆ.

ತದ ನಂತರ ಮುಖ್ಯ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಿ ಕೆಸರ್‌ದ ಗದ್ದೆ ಅಂಕಣದಲ್ಲಿ ಯುವಕರ ವಿಭಾಗ ಮತ್ತು ಯುವತಿಯರ ವಿಭಾಗದ ಕ್ರೀಡೆಗಳು ಪ್ರತ್ಯೇಕ – ಪ್ರತ್ಯೇಕವಾಗಿ ಉದ್ಘಾಟನೆಗೊಳ್ಳಲಿದೆ. ಕ್ರೀಡಾಭಿಮಾನಿ ಹಾಗೂ ಕ್ರೀಡಾಪಟುಗಳಿಗೆ ಬೋಜನದ ವ್ಯವಸ್ಥೆ ಇರುತ್ತದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಜರುಗಲಿರುವ ಬಗ್ಗೆ ಹಾಗೂ ದಾನಿಗಳ ಬೇಟಿ ಯುವಕ-ಯುವತಿ ಹವ್ಯಾಸಿ ಸಂಘಗಳ ಬೇಟಿ ಯಾವುದೇ ಸ್ಪರ್ದೆಯಲ್ಲಿ ಸ್ಪರ್ದಾಳುಗಳು ಭಾಗವಹಿಸುವುದಾದಲ್ಲಿ ಸ್ಥಳೀಯ ಸಂಘಟನೆಗಳ ಹೆಸರಿನಲ್ಲೇ ನೊಂದಾಯಿಸಿಕೊಂಡು ಭಾಗವಹಿಸುವಂತೆ ವಿಜೇತ ತಂಡಗಳಿಗೆ ನಗದು ಬಹುಮಾನ ಟ್ರೋಪಿ ಮತ್ತು ಪ್ರಶಸ್ತಿ ಪತ್ರ ನೀಡುವಂತೆ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ.

ಭಾಗವಹಿಸುವ ತಂಡಗಳ ಹೆಸರು ಮುಂಚಿತವಾಗಿ ಅ.25ರೊಳಗೆ ನೊಂದಾಯಿಸುವಂತೆ ನಿರ್ಧರಿಸಲಾಗಿ ಅ.29ರಂದು ಕ್ಲಪ್ತ ಸಮಯದಲ್ಲಿ ಸ್ಥಳದಲ್ಲಿರದ ಸ್ಪರ್ದಾಳುಗಳನ್ನು ಕೈ ಬಿಡಲಾಗುವುದೆಂದೂ ಯಾವುದೇ ಸ್ಪರ್ದೆ ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಅವಕಾಶವೆಂದೂ ನಿರ್ಧರಿಸಲಾಯಿತು.

ಈ ಎಲ್ಲಾ ವ್ಯವಸ್ಥೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು ಹಾಗೂ ಕಾರ್ಯಕ್ರಮದ ಅಂದಾಜು ಮೊತ್ತ 6.50ಲಕ್ಷ ದಿಂದ 7ಲಕ್ಷ ರೂ ಖರ್ಚಾಗಬಹುದೆಂದು ಅಂದಾಜಿಸಲಾಯಿತು. ಕ್ರೀಡಾ ಚಟುವಟಿಕೆಯ ಸಹಾಯಾರ್ಥವಾಗಿ ಲಕ್ಕಿಡಿಪ್ ಟಿಕೇಟ್ ಮಾಡಲಾದ ವಿವರ ನೀಡಿ, ವೈಯಕ್ತಿಕ ಹಾಗೂ ಸಾಂಸ್ಕೃತಿಕ ದೇಣಿಗೆ ಪಡೆದು ರಶೀದಿ ನೀಡುವ ಬಗ್ಗೆ ತೀರ್ಮಾನಿಸಲಾಯಿತು.ತಾಲೂಕು ಯುವಜನ ಒಕ್ಕೂಟ ರಿ. ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ಯುವಕ ಮಂಡಲ ಮುಂಡತ್ತೋಡಿ ಉಜಿರೆ ಇದರ ಸಾರಥ್ಯದಲ್ಲಿ ತಾಲೂಕಿನ ವಿವಿಧ ಯುವಕ-ಯುವತಿ ಹವ್ಯಾಸಿ ಮಂಡಲ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವುಗಳ ಸಹಕಾರದೊಂದಿಗೆ ನಡೆಯಲಿದ್ದು ಈ ಬಗ್ಗೆ ಈ ತನಕ ಆಗಿರುವ ಪ್ರಗತಿ ವಿವರವನ್ನು ಒಕ್ಕೂಟದ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ವಿವರಿಸಿದರು ಹಾಗೂ ತಾಲೂಕಿನ ಎಲ್ಲಾ ಸಂಘಟನೆಗಳು ಭಾಗವಹಿಸುವಂತೆ ಕರೆಯಿತ್ತು ಮಾತನಾಡಿದರು.

ಯುವಜನ ಒಕ್ಕೂಟದ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮಾತನಾಡುತ್ತಾ ಕಾರ್‍ಯಕ್ರಮ ಪಕ್ಷ ಬೇದ ಮರೆತು ಯಶಸ್ಸಿಗೆ ಸಹಕರಿಸುವಂತೆ ಮಾತನಾಡಿದರು. ಮುಂಡತ್ತೋಡಿ ಶ್ರೀ ಯುವಕ ಮಂಡಲದ ಅಧ್ಯಕ್ಷ ರಜನೀಶ್ ಸಂದರ್ಬೋಚಿತವಾಗಿ ಮಾತನಾಡಿದರು. ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು. ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಹೆಗ್ಡೆ ಸ್ವಾಗತಿಸಿ, ಕೋಶಾಧಿಕಾರಿ ಆನಂದ ಕೋಟ್ಯಾನ್ ಧನ್ಯವಾದವಿತ್ತರು. ಹೆಚ್ಚಿನ ಸಂಖ್ಯೆಯಲ್ಲಿ ಮುಂಡತ್ತೋಡಿ ಶ್ರೀ ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here