ಹೊಸಂಗಡಿ: ಗ್ರಾಮ ಪಂಚಾಯತ್ ಹೊಸಂಗಡಿ ಮತ್ತು ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಮತ್ತು ಹಳೆ ವಿದ್ಯಾರ್ಥಿ ಸಂಘ ಮತ್ತು ಹಿ.ಪ್ರಾ.ಶಾಲೆ ಪಡ್ಡoದಡ್ಕ ಹಾಗೂ ಅಂಗನವಾಡಿ ಕೇಂದ್ರ ಪಡ್ಡoದಡ್ಕ ಸಹಭಾಗಿತ್ವದೊಂದಿಗೆ ನೆಲ ಜಲ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ನನ್ನ ಗಿಡ-ನನ್ನ ಮರ ನನ್ನ ನೆಲ-ನನ್ನ ಜಲ ಸಪ್ತಾಹ ಕಾರ್ಯಕ್ರಮದ ಐದನೇ ದಿನ ಸೆ.30 ರಂದು ಹಿರಿಯ ಪ್ರಾಥಮಿಕ ಶಾಲೆ ಪಡ್ಡoದಡ್ಕ ಶಾಲಾ ವಠಾರದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆ ಅರಿವು ಮತ್ತು ಅಮೃತ ವನದ ಪುನಶ್ಚೇತನ ಮತ್ತು ಪಡ್ಡoದಡ್ಕ ಅಂಗನವಾಡಿಯ ಪೌಷ್ಠಿಕ ತೋಟದ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ವಹಿಸಿದ್ದರು.ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಪಿ. ನಾಗರತ್ನ, ಪ್ರಕಾಶ್ ದೇವಾಡಿಗ, ರೋಟರಿ ತರಬೇತು ರೋ.ರಾಜೇಶ್ ನೆಲ್ಯಾಡಿ, ಪಿಡಿಒ ಗಣೇಶ್ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶಬೀರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಗುತ್ತಿಗೆದಾರ ಎಸ್.ಮಹಮ್ಮದ್ , ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕಿ ಸುಶೀಲ, ಸಹಾಯಕಿ, ಪೋಷಕರು, ವಿಧ್ಯಾರ್ಥಿಗಳು ಹಾಗೂ ಆಳ್ವಾಸ್ ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ದರು.ಪಡ್ಡoದಡ್ಕ ಶಾಲಾ ವಠಾರದಲ್ಲಿ ರಚಿಸಲಾದ 75 ವಿವಿಧ ಜಾತಿಯ ಗಿಡಗಳನ್ನು ಒಳಗೊಂಡ ಅಮೃತ ವನಕ್ಕೆ ಜೈವಿಕ ಗೊಬ್ಬರ ಮತ್ತು ಕಳೆ ಕೀಳುವ ಮೂಲಕ ಪುನಶ್ಚೇತನಗೊಳಿಸಲಾಯಿತು.ಮತ್ತು ನನ್ನ ಗಿಡ ನನ್ನ ಮರ ಯೋಜನೆ ಬಗ್ಗೆ ಅಂಗನವಾಡಿಯಲ್ಲಿ ಪೋಷಕರಿಗೆ ನೆಲ ಜಲ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಯಿತು.