ಕೊಯ್ಯೂರು: ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿ ವರ್ಗಾವಣಗೊಂಡ ಬಾಲಕೃಷ್ಣ ಬೇರಿಕೆಯವರ ಬೀಳ್ಕೊಡುಗೆ ಸಮಾರಂಭವು ಸೆ.23ರಂದು ನಡೆಯಿತು.
ಅಭಿನಂದನಾ ಭಾಷಣ ಮಾಡಿದ ಕೊಯ್ಯೂರು ಪ್ಯಾಕ್ಸ್ ನ ನಿರ್ದೇಶಕ ಅಶೋಕ್ ಕುಮಾರ್ ಅಗ್ರಸಾಲೆಯವರು, ಬಾಲಕೃಷ್ಣ ಬೇರಿಕೆಯವರ ಮಾದರಿ ವ್ಯಕ್ತಿತ್ವ, ನಯ-ವಿನಯ, ನಾಯಕತ್ವ ಗುಣ, ಶಿಸ್ತು, ಉತ್ತಮ ಆಡಳಿತ, ಸಂಸ್ಥೆಯ ಪ್ರಗತಿಯ ಬಗ್ಗೆ ದೃಷ್ಟಿ ಕೋನ-ಇವುಗಳ ಬಗ್ಗೆ ಕೊಂಡಾಡಿದರು.ಕಾಲೇಜು ವಿದ್ಯಾರ್ಥಿ ವೃಂದ, ಹಳೆ ವಿದ್ಯಾರ್ಥಿಗಳು, ಕೊಯ್ಯೂರು ಗ್ರಾಮ ಪಂಚಾಯತ್ ವತಿಯಿಂದಲೂ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಮೋಹನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಉಪಾಧ್ಯಕ್ಷ ಹರೀಶ್ ಬಜಿಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್,ಕೊಯ್ಯೂರು ಪ್ಯಾಕ್ಸ್ ಅಧ್ಯಕ್ಷ ನವೀನ್ ವಾದ್ಯಕೋಡಿ,ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಭಟ್, ಕೊಯ್ಯೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗೌಡ, ಲತೀಫ್, ಶ್ರೀಮತಿ ಹೇಮಾವತಿ ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಕಛೇರಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಮತಿ ಜಯಶ್ರೀ ಯವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಾದ ಹಯಫಾತಿಮಾ, ಮೇಘಶ್ರೀ, ರಂಝಿನ, ಭವ್ಯ, ಪವನ್ಯ ರವರು ಪ್ರಾರ್ಥನೆಗೈದರು.ವಿದ್ಯಾರ್ಥಿನಿಯರಾದ ಆಯಿಷಾತ್ ರಾಬಿಹಾ ಮತ್ತು ರಂಝಿನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕನ್ನಡ ಉಪನ್ಯಾಸಕಿ ರಶ್ಮಿ ದೇವಿ ಪ್ರಸ್ತಾವನೆಗೈದು ಸ್ವಾಗತಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕಿ ಶಿಲ್ಪ ಡಿ. ಸನ್ಮಾನ ಪತ್ರ ವಾಚಿಸಿದರು.ಅರ್ಥಶಾಸ್ತ್ರ ಉಪನ್ಯಾಸಕಿ ತೃಪ್ತಿ ವಂದಿಸಿದರು.ವಾಣಿಜ್ಯ ಶಾಸ್ತ್ರ ಉಪನ್ಯಾಸಕರುಗಳಾದ ಭವ್ಯ ಮತ್ತು ಪ್ರೀತಿ, ಸಮಾಜ ಶಾಸ್ತ್ರ ಉಪನ್ಯಾಸಕ ಮಾಯಿಲ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರೂಪಿಸಿದರು.