ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ- ನಿವ್ವಳ ರೂ.1.53 ಕೋಟಿ ಲಾಭ ಶೇ.18% ಡಿವಿಡೆಂಡ್‌ ಘೋಷಣೆ

0

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 1.53 ಕೋಟಿ ಲಾಭ ಗಳಿಸಿ, ದಾಖಲೆ ನಿರ್ಮಿಸಿದ್ದು ಪ್ರಸ್ತಕ ಸಾಲಿನಲ್ಲಿ ಶೇ.18 ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ತಿಳಿಸಿದರು.

ಗುರುವಾಯನಕೆರೆಯ ಬಂಟರ ಭವನದಲ್ಲಿ ಸೆ.23ರಂದು ನಡೆದ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ವಾರ್ಷಿಕ ವ್ಯವಹಾರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚು ಲಾಭ ಗಳಿಸಲು ಸಂಘದ ಸದಸ್ಯರ, ನಿರ್ದೇಶಕರ ಮತ್ತು ಸಿಬ್ಬಂದಿ ವರ್ಗದ ಪೂರ್ಣ ಸಹಕಾರ ಬೇಕೆಂದರು.
ಸಂಘವು 2022-23ನೇ ಸಾಲಿನ ಲೆಕ್ಕ ಪರಿಶೋಧನೆ ವರದಿ ಪ್ರಕಾರ ರೂ.1.5391105 ಲಾಭ ಗಳಿಸಿ, 22-23 ವಾರ್ಷಿಕ ವ್ಯವಹಾರ ಸುಮಾರು 571 ಕೋಟಿಗೂ ಮೀರಿದ್ದು. ಸಂಘದಲ್ಲಿ 26,884 ಸದಸ್ಯರಿದ್ದು ಆರ್ಥಿಕ ವರ್ಷಾಂತ್ಯಕ್ಕೆ ರೂ.2.8388,000 ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಪ್ರಸ್ತಕ ಸಾಲಿನಲ್ಲಿ ರೂ.1483464889.11 ಠೇವಣಿ ಸಂಗ್ರಹವಾಗಿದ್ದು ರೂ.115,23,74059.76 ಸಾಲ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಸಂಘವು ಹೆಚ್ಚಿನ ಗುಣಮಟ್ಟದ ಸೇವೆ ನೀಡುವ ಸಂಕಲ್ಪ ಹೊಂದಲಾಗಿದೆ ಗುರುವಾಯನಕೆರೆ ಶಾಖೆ, ಬ್ರಹ್ಮಾವರ ಹಾಗೂ ಸುರತ್ಕಲ್ ಶಾಖೆಗಳು ಸ್ವಂತ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದ್ದು, ಗುರುವಾಯನಕೆರೆ ಶಾಖೆ ಇದೀಗ ನವೀಕರಣಗೊಂಡು ಹವಾ ನಿಯಂತ್ರಿತ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಏಂ.ಜಿ. ಶೆಟ್ಟಿ, ನಿರ್ದೇಶಕರುಗಳಾದ ಜಯಂತ್ ಶೆಟ್ಟಿ, ಜಯರಾಮ್ ಭಂಡಾರಿ, ಬಾಲಕೃಷ್ಣ ಪೂಂಜ, ರಾಜೇಶ್ ಶೆಟ್ಟಿ ನವಶಕ್ತಿ, ನಾರಾಯಣ ಶೆಟ್ಟಿ, ಕೃಷ್ಣ ಶೆಟ್ಟಿ, ಪುರಂದರ ಶೆಟ್ಟಿ, ಮಂಜುನಾಥ ರೈ, ಅಂಬಾ ಬಿ.ಆಳ್ವ ಸಾರಿಕಾ ಶೆಟ್ಟಿ ಧರ್ಮಸ್ಥಳ ಉಪಸ್ಥಿತರಿದ್ದರು.ಸಂಘದ ನಿರ್ದೇಶಕ ರಘುರಾಮ ಶೆಟ್ಟಿ ಸಾಧನಾ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವರದಿ ಮಂಡಿಸಿದರು.ಹಿರಿಯ ನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here