ನಾರ್ಯ ವಿಶೇಷ ಚೇತನ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

0

ಧರ್ಮಸ್ಥಳ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಡೋಲೆ ನಾರ್ಯ ಎಂಬಲ್ಲಿ ವಾಸವಾಗಿರುವ ಕಮಲ ತನಿಯ ಬಡ ಕುಟುಂಬದಲ್ಲಿ ಗಂಗಯ್ಯ, ಮೋನಮ್ಮ, ತುಂಗಪ್ಪ, ಮೂರು ಜನ ಮಕ್ಕಳು ವಿಶೇಷ ಚೇತನರು ಆಗಿದ್ದು, ಈ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ವೀಲ್ ಚಯರ್, ಶೌಚಾಲಯದ ಪೀಠೋಪಕರಣಗಳು, ಹ್ಯಾಂಡ್ ಸ್ಟಿಕ್ ಸಾಮಗ್ರಿಗಳನ್ನು ಅವರ ಮನೆಗೆ ತೆರಳಿ ವಿತರಿಸಲಾಯಿತು.

ಕುಟುಂಬದ ಮೂಲಭೂತ ಸೌಕರ್ಯದ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಾ ಇರುತ್ತದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಸದಸ್ಯರುಗಳಾದ ಸುಧಾಕರ ಗೌಡ, ರೇವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಪಂಚಾಯತಿ ಕಾರ್ಯದರ್ಶಿ ದಿನೇಶ್ ಎಂ, ಲೆಕ್ಕ ಸಹಾಯಕಿ ಪ್ರಮೀಳಾ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here