ಬಳಂಜ: ಭಾರತ ಧಾರ್ಮಿಕ ಪರಂಪರೆಯುಳ್ಳ ದೇಶ, ನಾವೆಲ್ಲರೂ ಪ್ರಕೃತಿ ಆರಾಧಕರು.ಬೇರೆ ದೇಶದಲ್ಲಿ ಭೂಮಿಯನ್ನು ಜಮೀನು ಎಂದು ಭಾವಿಸಿದರೆ ನಾವು ಭೂಮಿಯನ್ನು ತಾಯಿ ಸ್ವರೂಪವಾಗಿ ನೋಡುತ್ತೇವೆ.ಅಂತಹ ಪುಣ್ಯಭೂಮಿ ನಮ್ಮದು.ಯುವ ಸಾಧಕ ರಾಕೇಶ್ ಹೆಗ್ಡೆ ಬಳಂಜ ಅವರ ಅಧ್ಯಕ್ಷತೆಯಲ್ಲಿ ಗಣೇಶೋತ್ಸವ ಅತ್ಯಂತ ಅಚ್ಚುಕಟ್ಟಾಗಿ ಮೂಡಿ ಬಂದಿದೆ ಎಂದು ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ಹೇಳಿದರು.
ಅವರು ಸೆ.19 ರಂದು ಬಳಂಜದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕ್ರೀಡಾಕೂಟದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಭಾರತ್ ಆಟೋ ಕಾರ್ಸ್ ಪ್ರವೀಣ್ ಕುಮಾರ್ ಹೆಚ್.ಎಸ್, ಬಳಂಜ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ ಅಟ್ಲಾಜೆ, ಪ್ರಗತಿಪರ ಕೃಷಿಕರಾದ ಸತೀಶ್ ರೈ ಬಾರ್ದಡ್ಕ,ವಿಶ್ವನಾಥ ಹೊಳ್ಳ,ಉದ್ಯಮಿ ಸಂತೋಷ್ ಹೆಗ್ಡೆ ತೆಂಕಕಾರಂದೂರು, ಪತ್ರಕರ್ತ ಮನೋಹರ್ ಕುಮಾರ್ ಬಳಂಜ, ಮೈಟ್ ಪ್ರೊಫೆಸರ್ ರಂಜಿತ್ ಹೆಚ್.ಡಿ ಸುಧಾಮ, ಯುವ ಉದ್ಯಮಿ ಸಚಿನ್ ಶೆಟ್ಟಿ ಕುರೆಲ್ಯ ಉಪಸ್ಥಿತರಿದ್ದರು.
ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ರೈ ಪಾಂಡ್ಯೋಟ್ಟು ಸ್ವಾಗತಿಸಿದರು.ಶಿಕ್ಷಕ ಹರೀಶ್ ಹಾಣಿಂಜ ನಿರೂಪಿಸಿದರು.ಸಂತೋಷ್ ಕುಮಾರ್ ವಂದಿಸಿದರು.
ಪುರುಷರಿಗೆ, ಯುವತಿಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳು ಜರುಗಿದವು.