ಪದ್ಮುಂಜ: ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ- ಒಂದು ಕೋಟಿ ಲಾಭ ದೊಂದಿಗೆ ನಮ್ಮ ಸಂಘ ಮುನ್ನಡೆಯುತ್ತಿದೆ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ

0

ಪದ್ಮುಂಜ: ಇಲ್ಲಿಯ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ 17 ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ ರವರ ಅಧ್ಯಕ್ಷತೆಯಲ್ಲಿ ಜರಗಿತು.ಸಂಘದ ಸಿಬ್ಬಂದಿ ಗಳಾದ ರಕ್ಷಿತ್ ಹಾಗೂ ಮದುಶ್ರೀ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಅಧ್ಯಕ್ಷೀಯ ಭಾಷಣ ಮಾಡಿದ ರಕ್ಷಿತ್ ಶೆಟ್ಟಿ ಪಣೆಕ್ಕರ ರವರು ನಮ್ಮ ಸಂಘವು ಸಂಘದ ಸದಸ್ಯರ ಗ್ರಾಹಕರ ಸಿಬ್ಬಂದಿಗಳ ಆಡಳಿತ ಮಂಡಳಿಯ ಸಹಕಾರದಿಂದ ವಾರ್ಷಿಕ ವಾಗಿ 1.07.88.059.90 ಲಾಭ ದೊಂದಿಗೆ ವ್ಯವಹಾರ ನಡೆಸಲು ಸಾಧ್ಯವಾಗಿದೆ ತಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಬೈಲಾ ತಿದ್ದುಪಡಿಯಂತೆ ಮುಂದಿನ ದಿನಗಳಲ್ಲಿ ಎರಡು ಮಹಾಸಭೆಗೆ ಹಾಜರಾದವರೀಗೂ ಮತದಾನದ ಹಕ್ಕು ದೊರೆಯಲಿದೆ ಎಂದರು.ನಮ್ಮ ಸಂಘವು ವಿವಿದ ರಂಗದಲ್ಲಿ ಉನ್ನತ ಸಾಧನೆ ಮಾಡಿದ ಸಂಘಗಳನ್ನು ವ್ಯಕ್ತಿಗಳನ್ನು ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಸದಸ್ಯರ ಸಹಕಾರದಿಂದ ಹಮ್ಮಿಕ್ಕೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷರಾದ ಆಶೋಕ್ ರವರು ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ಹೇಳಿದರು.ಸಿಬ್ಬಂದಿ ಅಂಕಿತಾರವರು ವಾರ್ಷಿಕ ವರದಿ ವಾಚಿಸಿದರು.ಕಾರ್ಯನಿರ್ವಾಣಾಧಿಕಾರಿ ರಘುಪತಿ ಭಟ್ ರವರು. ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ರಂಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ. 100 ಶೇಕಡ ಪಡೆದ ಪ್ರೌಡ ಶಾಲೆಗಳಿಗೆ ಜಿಲ್ಲಾ ಪ್ರಶಸ್ತಿ ಪಡೆದ ಹಾಲು ಸೊಸೈಟಿ ಗೆ ಜಿಲ್ಲಾ ಮಟ್ಟ ರಾಜ್ಯ ಮಟ್ಟಕ್ಕೆ ಆಯ್ಕೆಯಾದ.ಕ್ರೀಡಾಪಟುಗ ಳಗಳನ್ನು ಗುರುತಿಸಿ ಸನ್ಮಾನಿಸಲಾಯಿತು.ಸಂಘದ ನಿರ್ದೇಶಕರುಗಳಾದ ಉದಯ ಭಟ್ ಕೆ., ರಾಜೀವ ರೈ ಎ ಬಿ., ವಿನಯಶ್ರೀ, ಶೀಲಾವತಿ, ಕೇಶವ, ದಿನೇಶ್ ನಾಯ್ಕ, ಪಿಜಿನ ಮುಗೇರ ಉಪಸ್ತಿತರಿದ್ದರು.ನಾರಾಯಣ ಗೌಡ ರವರು ಸ್ವಾಗತಿಸಿ, ಉದಯ ಸಿ ಕೆ ಧನ್ಯವಾದ ಸಲ್ಲಿಸಿದರು.

p>

LEAVE A REPLY

Please enter your comment!
Please enter your name here