ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ಇಂಜಿನಿಯರ್ಸ್ ದಿನ ಆಚರಣೆ

0

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ಇಲ್ಲಿ ಪ್ರತಿ ಶುಕ್ರವಾರ ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಈ ವಾರ ವಿಜ್ಞಾನ ವಿಭಾಗದಲ್ಲಿ ಇಂಜಿನಿಯರ್ಸ್ ದಿನವನ್ನು ಆಚರಿಸಲಾಯಿತು. ಸರ್.ಎಂ ವಿಶ್ವೇಶ್ವರಯ್ಯರವರ ಜೀವನ ಚರಿತ್ರೆಯನ್ನು ವಿಡಿಯೋದ ಮೂಲಕ ತಿಳಿಸಲಾಗಿದೆ. ಅದೇ ರೀತಿ ಪರಿಸರ ವಿಭಾಗದಲ್ಲಿ ಗುರುಕುಲ ಮಾದರಿಯ ಶಿಕ್ಷಣವನ್ನು ಪರಿಚಯಿಸುವ ಮೂಲಕ ಮಕ್ಕಳಿಗೆ ಎಲೆಗಳ ಔಷಧಿಯ ಗುಣಗಳನ್ನುತಿಳಿಸಿಕೊಡಲಾಯಿತು.

ಹಾಗೆಯೇ ಗಣಿತ ವಿಭಾಗದಲ್ಲಿ ಗಣಿತಕ್ಕೆ ಸಂಬಂಧಿಸಿದ ಆಟವನ್ನು ಆಡಿಸಿ ಮಕ್ಕಳನ್ನು ರಂಜಿಸಿದರು.ತ್ರಿಭಾಷಾವಿಭಾಗದಲ್ಲಿ ಮಕ್ಕಳಿಗೆ ಅಕ್ಷರ ಪರಿಚಯಕ್ಕೆ ಸಂಬಂಧಪಟ್ಟ ಆಟ ಆಡಿಸಿದರು. ಅದೇ ರೀತಿ ಸಾಂಸ್ಕೃತಿಕ ವಿಭಾಗದಲ್ಲಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಎನ್‌ಸಿಸಿ ಮತ್ತು ಸೇವಾದಳ ವಿಭಾಗದಲ್ಲಿ ತಮ್ಮದೇ ಆದ ಚಟುವಟಿಕೆಗಳ ತರಬೇತಿಯನ್ನು ನೀಡಲಾಯಿತು.

ವಿಭಾಗವಾರು ಶಿಕ್ಷಕರಾದ ವಿಜ್ಞಾನ -ವಿನಯ್ ಮತ್ತು ಸ್ವಾತಿ, ಗಣಿತ- ಶ್ವೇತಾ ಮತ್ತು ಸಂಧ್ಯಾ, ತ್ರಿಭಾಷಾ – ಮಮತಾ ಶಾಂತಿ ಮತ್ತು ಅಕ್ಷತಾ, ಎನ್‌ಸಿಸಿ-  ಮಧುಸರ್ ಮತ್ತು ಸಂಗೀತ, ಸೇವಾದಳ -ಶುಭ ಮತ್ತು ಪವಿತ್ರ, ಪರಿಸರ -ಸ್ವರ್ಣಲತಾ ಮತ್ತು ರೂಪಲತಾ, ಸಾಂಸ್ಕೃತಿಕ- ಸ್ವಪ್ನಜ್ ಮತ್ತು ವೀಣಾ ಮಕ್ಕಳಿಗೆ ಸಹಕರಿಸಿದರು.ಶಾಲಾ ಸಂಚಾಲಕರಾದ ಗಿರೀಶ್ ಕೆ.ಎನ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪ್ರೋತ್ಸಾಹಿಸಿದರು.

p>

LEAVE A REPLY

Please enter your comment!
Please enter your name here