ಕೆಂಬರ್ಜೆಯ ಲ್ಯಾನ್ಸಿ ಫೆರ್ನಾಂಡೀಸ್ ಇಸ್ರೇಲ್ ನಲ್ಲಿ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಂಬರ್ಜೆಯ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ (47ವ)ರವರು ಸೆ.13ರಂದು ಇಸ್ರೇಲ್ ನಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ಎಲೆಕ್ಟ್ರಾನಿಕ್ಸ್ ಶಾಪ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಇವರು ನಂತರ ಉದ್ಯೋಗಕ್ಕಾಗಿ ಇಸ್ರೇಲ್ ಗೆ ತೆರಳಿ ಹಲವಾರು ವರ್ಷದಿಂದ ಅಲ್ಲಿ ಉದ್ಯೋಗದಲ್ಲಿದ್ದರು.

ಇವರ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.ಪೋಸ್ಟ್ ಮಾರ್ಟಂ ವರದಿಗಾಗಿ ಅವರ ಮನೆಯವರು ಕಾಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಮೃತರು ಶಿಕ್ಷಕಿಯಾಗಿರುವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ತಪ್ಪು ಮಾಹಿತಿಯಿಂದಾಗಿ ಲ್ಯಾನ್ಸಿ ಫೆರ್ನಾಂಡೀಸ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ಪ್ರಕಟವಾಗಿತ್ತು.ಅದಕ್ಕಾಗಿ ಸುದ್ದಿ ಬಳಗ ವಿಷಾದ ವ್ಯಕ್ತಪಡಿಸುತ್ತದೆ.

LEAVE A REPLY

Please enter your comment!
Please enter your name here