ಮಾಚಾರು: ಇಲ್ಲಿನ ಪ್ರಗತಿ ಯುವಕ ಮಂಡಲ ಮಾಚಾರು, ಪ್ರಗತಿ ಯುವತಿ ಮಂಡಲ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಬದನಾಜೆ ಮತ್ತು ಸ.ಉ.ಹಿ.ಪ್ರಾ ಶಾಲೆ ಬದನಾಜೆ ಹಾಗೂ ಹಳೆವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಬೆಳಗ್ಗೆ ಸ್ಥಳೀಯರಾದ ಸೇಸಪ್ಪ ಗೌಡ ಎಕ್ಕಿನಬೆಟ್ಟು ಇವರಿಂದ ಉದ್ಘಾಟನೆಗೊಂಡ ಕಾರ್ಯಕ್ರಮ ಸಂಜೆಯವರೆಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳ ಮೂಲಕ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಸೋಮಶೇಖರ್.ಕೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೇಧಾ ಕೆ, ಸಹಶಿಕ್ಷಕಿ ಸರಕಾರಿ ಪ್ರೌಢಶಾಲೆ ಬದನಾಜೆ, ಬೆಳಾಲು ಸಿ.ಎ.ಬ್ಯಾಂಕ್ ನಿರ್ದೇಶಕರಾದ ಸುಲೈಮಾನ್ ಭೀಮಂಡೆ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಅನಿಲ್ ಡಿಸೋಜ, ಯುವಕ ಮಂಡಲ ಗೌರವಾಧ್ಯಕ್ಷರಾದ ರಾಮಯ್ಯ ಗೌಡ, ಭಜನಾ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಪಾಲೆಂಜ, ಕಟ್ಟಡ ಸಮಿತಿ ಅಧ್ಯಕ್ಷ ದಿಲೀಪ್ ನಾಯರ್, ಯುವತಿ ಮಂಡಲ ಅಧ್ಯಕ್ಷೆ ಅರುಣಾಕ್ಷಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್.ಪಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುದ್ದು ಕೃಷ್ಣ ವೇಷ ಧರಿಸಿದ್ದ ಪುಟಾಣಿಗಳು ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿದ್ದರು.ಪಾಲ್ಗೊಂಡಿದ್ದ ಎಲ್ಲಾ ಮುದ್ದುಕೃಷ್ಣರಿಗೆ ಬಹುಮಾನದ ಜೊತೆಗೆ ಹಣ್ಣಿನ ಗಿಡಗಳನ್ನು ನೀಡಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡಿರುವುದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಶಿಕ್ಷಕರಾದ ಸುರೇಶ್ ಮಾಚಾರ್ ನಿರೂಪಿಸಿ, ಸದಸ್ಯರಾದ ಮೋಹನ್ ಎಚ್.ಬಿ.ಸ್ವಾಗತಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನ್ ಪಿ ವಂದಿಸಿದರು.