ಕನ್ಯಾಡಿ: ಕನ್ಯಾಡಿ ಜಯನಗರ ಗುರಿಪಳ್ಳ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾಭವನದಲ್ಲಿ ಸೆ.8ರಂದು ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ್ ಗೌಡ ಅದ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷೆ ಸವಿತಾ, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಯಮುನಾರವರು ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.
ಪಶು ವೈದ್ಯಾಧಿಕಾರಿ ಡಾ.ಗಣಪತಿ ಬಿ.ಎಂ. ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ವಸಂತಿ ಕಾರಿಜೆ, ರತ್ನಾವತಿ ಮಾಳಿಗೆ ಮನೆ, ಸುನಂದ, ಪ್ರೇಮಾ, ಜಲಜ ಮಾಳಿಗೆ ಮನೆ, ಲತಾ, ದೇವಕಿ, ಗೀತಾ ಕೇರಿಮಾರು, ಗೀತಾ ವಿ. ನಾಯ್ಕ, ಮಲ್ಲಿಕಾ, ಕಮಲಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿ ರೇವತಿ ವರದಿ, ಲೆಕ್ಕ ಪತ್ರ ಮಂಡಿಸಿ ನಿರೂಪಿಸಿ ವಂದಿಸಿದರು. ಸಿಬಂದಿಗಳು ಸಹಕರಿಸಿದರು. ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಭಿವೃದ್ಧಿಗೆ ಸಹಕರಿಸಿದ ಅನಿತಾ, ಅನಾರೋಗ್ಯ ದಿಂದ ಸ್ವಯಂ ನಿವೃತ್ತಿ ಹೊಂದಿದ ಸಿಬಂದಿ ಪ್ರೇಮಾ, ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ನಿರ್ದೇಶಕರುಗಳಾದ ಲಲಿತಾ, ಪೂರ್ಣಿಮಾ, ಗುಲಾಬಿ, ಸುಶೀಲಾ, ಪ್ರಮೀಳಾ, ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹರ್ಷಿತರಾಣಿ, ಸುಜಾತಾ ಕೆ, ಗೀತಾ, ವಾಣಿ ಭಟ್ ಇವರನ್ನು ಗೌರವಿಸಲಾಯಿತು.
ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅರ್ಚನಾ, ಚಿತ್ರ, ಅನನ್ಯ, ಮಲ್ಲಿಕಾ, ಅನಿತಾ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಯಶ್ವಿತಾ ಇವರಿಗೆ ವಿದ್ಯಾರ್ಥಿವೇತನ ನೀಡಲಾಯಿತು.ರಾಸುಗಳು ಮೃತ ಪಟ್ಟ ಕುಟುಂಬಕ್ಕೆ ಪರಿಹಾರ ಧನ ವಿತರಿಸಲಾಯಿತು.ಸಂಘವು ಲೆಕ್ಕ ಪರಿಶೋಧನೆಯಲ್ಲಿ ‘A’ ಗ್ರೇಡ್ ಪಡೆದಿದೆ ಹಾಗೂ ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 15% ಘೋಷಿಸಲಾಯಿತು.