ಶಿಶಿಲದ ಕಲ್ಲಾಜೆಯಲ್ಲಿ ಕಾಡಾನೆ ದಾಳಿಗೆ ಅಪಾರ ಕೃಷಿ ನಾಶ

0

ಶಿಶಿಲ: ಇಲ್ಲಿಯ ಕಳ್ಳಾಜೆಯ ನಿವಾಸಿ ದಿವಾಕರ ಗೌಡ ಇವರ ತೋಟದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ನಾಶವಾಗಿದೆ.ರಾತ್ರಿ ವೇಳೆ ತೋಟಕ್ಕೆ ಸುಮಾರು 3 ಆನೆಗಳು ನುಗ್ಗಿ 75 ಈಗಷ್ಟೆ ಫಸಲು ಬಿಡುವ ಅಡಿಕೆ ಗಿಡ 50 ಬಾಳೆಗಿಡ 4 ತೆಂಗಿನ ಗಿಡವನ್ನು ಬುಡದಿಂದಲೇ ಮುರಿದು ನಾಶಮಾಡಿದೆ.ಕುಡಿಯಲು ಇವರು ಕಾಡಿನ ನೀರನ್ನು ಅವಲಂಬಿಸಿದ್ದು ಇದರ ಪೈಪುಗಳನ್ನು ಕಾಡಾನೆ ನಾಶ ಪಡಿಸಿದೆ.ಒಟ್ಟಾರೆ ಕಾಡಾನೆ ದಾಳಿಯಿಂದ ದಿವಾಕರ ಗೌಡ ಇವರ ಮನೆಯವರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು ಭಯಭೀತರಾಗಿದ್ದಾರೆ: ಪ್ರತಿದಿನ ಇದೇ ದಾರಿಯಲ್ಲಿ ಹಲವಾರು ಮಕ್ಕಳು ಶಾಲೆಗೆ ತೆರಳುತ್ತಿದ್ದು ಮಕ್ಕಳು ಭಯಭೀತರಾಗಿ ಶಾಲೆಗೆ ತೆರಳಲು ಹಿಂಜರಿಯುತ್ತಿದ್ದಾರೆ

ಕಳೆದ 3 ತಿಂಗಳಲ್ಲಿ4 ಬಾರಿ ದಾಳಿ: ಇದೇ ಜಾಗದಲ್ಲಿ ಕಾಡಾನೆ ಹಲವಾರು ಬಾರಿ ದಾಳಿ ಮಾಡಿದ್ದು ಅಪಾರ ಕೃಷಿಯನ್ನು ನಾಶಮಾಡಿದ್ದು ಅಪಾರ ನಷ್ಟಕ್ಕೆ ಕಾರಣವಾಗಿದೆ. ಮೇಲಾಧಿಕಾರಿಗಳು ಒಂದು ಬಾರಿಯೂ ಭೇಟಿ ನೀಡಲಿಲ್ಲ ಅರಣ್ಯ ಇಲಾಖೆಯ ಗಮನಕ್ಕೆ ಇವರು ಸಾಕಷ್ಟು ಬಾರಿ ತಿಳಿಸಿದ್ದರೂ ತಳಮಟ್ಟದ ಅಧಿಕಾರಿಗಳು ಮಾತ್ರ ಆಗಮಿಸಿ ವಿಚಾರಿಸುತ್ತಿದ್ದು ಮೇಲಾಧಿಕಾರಿಗಳು ಒಂದು ಬಾರಿಯೂ ಭೇಟಿ ನೀಡಲಿಲ್ಲ ಎಂದು ನೆರೆಹೊರೆಯವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here