ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ನಿಯಮಿತ ಬೆಳ್ತಂಗಡಿ ಇದರ ಅಂಗ ಶಾಖೆ ನಿಡ್ಲೆಯಲ್ಲಿ ಉದ್ಘಾಟನೆ

0

ನಿಡ್ಲೆ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ನಿಯಮಿತ ಬೆಳ್ತಂಗಡಿ ಇದರ ಅಂಗ ಶಾಖೆ ನಿಡ್ಲೆಯ ಸಮೃದ್ಧಿ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಅನುವಂಶಿಕ ಆಡಳಿತ ಮೊಕ್ತೇಸರರು ಜನಾರ್ಧನ ದೇವಸ್ಥಾನ ಉಜಿರೆ ಇವರು ಉದ್ಘಾಟಿಸಿದರು.ನಂತರ ಮಾತನಾಡಿದ ಶ್ರೀಯುತರು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಹೆಚ್ಚು ಶಾಖೆಗಳನ್ನು ತೆರೆದು ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಜನರಿಗೆ ಉತ್ತಮ ಸೇವೆ ನೀಡುವಂತಾಗೇಕು ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಹರೀಶ್ ಕುಮಾರ್ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ ಇವರು ವಹಿಸಿದ್ದರು.ಹರೀಶ್ ಕುಮಾರ್ ಅವರು ಮಾತನಾಡಿ ಬ್ಯಾಂಕಿನ ಕಾರ್ಯ ವೈಖರಿಯ ಮಹತ್ವವನ್ನು ತಿಳಿಸಿದರು.

ಕಾಯರ್ತಡ್ಕ, ಕಳೆಂಜ, ನಿಡ್ಲೆ ಬಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಮೀಪದಲ್ಲಿ ಅವರಿಗೆ ಸೇವೆಗಳು ಸಿಗುವಂತಾಗಲಿ ಎಂದು ಈ ಭಾಗದಲ್ಲಿ ಶಾಖೆಯನ್ನು ಆರಂಭಿಸಿದ್ದೇವೆ.
ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ಸಂಘವು ಉತ್ತಮ ಸ್ಥಿತಿಯಲ್ಲಿದ್ದು ಲಾಭದಾಯಕವಾಗಿದ್ದು ಲಾಭಾಂಶವನ್ನೂ ಡಿವಿಡೆಂಟ್ ಹಾಗೂ ಇತರ ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿ ಪರಿಶ್ರಮದಿಂದ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ತಿಳಿಸಿದರು.

ಕೃಷಿ ಪತ್ತಿನ ಸಹಕಾರಿ ಸಂಘ ನಿಡ್ಲೆ ಇದರ ಅಧ್ಯಕ್ಷ ರಮೇಶ್ ರಾವ್ ರವರು ಮೊದಲ ನಿರಖು ಠೇವಣಿ ಪತ್ರವನ್ನು ಅಜಯ್ ಕಾಯತಡ್ಕ ಇವರಿಗೆ ವಿತರಿಸಿದರು.ನಂತರ ಮಾತನಾಡಿದ ಅವರು ಸಂಘವು ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಸಹಕಾರಿ ಸಂಸ್ಥೆಗಳ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್ ರವರು ಮಾತನಾಡಿ ಆಡಳಿತ ಮಂಡಳಿಯ ಉತ್ತಮ ಕಾರ್ಯ ನಿರ್ವಹಣೆಯಿಂದ ಹೊಸ ಹೊಸ ಶಾಖೆಯನ್ನು ತೆರೆಯಲು ಸಾಧ್ಯ.ಪ್ರಿಯದರ್ಶಿನಿ ಸಂಸ್ಥೆಯು ವೇಗವಾಗಿ ಬೆಳೆಯುತ್ತಿದ್ದು ಜಿಲ್ಲೆಗೆ ಒಂದು ಉತ್ತಮ ಸಹಕಾರಿ ಸಂಸ್ಥೆಯಾಗುತ್ತಿದೆ ಎಂದು ತಿಳಿಸಿದರು.

ಶಾಖೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಸೈಂಟ್ ಸೆಬೇಸ್ಟಿಯನ್ ಚರ್ಚ್ ಕಾಯರ್ತಡ್ಕ ಇದರ ಧರ್ಮಗುರುಗಳಾದ ವಂದನೀಯ ಫಾದರ್ ಜೋಸೆಫ್ ವಾಲುಕಾರನ್ ಇನ್ನು ಮುಂದೆ ನಿಡ್ಲೆಯ ಬೆಳವಣಿಗೆಯಲ್ಲಿ ಪ್ರಿಯದರ್ಶಿನಿ ಸಂಸ್ಥೆಯ ಕೊಡುಗೆಯು ಇರಲಿದೆ.ಹೀಗೆ ಹೆಚ್ಚು ಹೆಚ್ಚು ಸಂಘ ಸಂಸ್ಥೆಗಳು ಆಗಮಿಸಿದಾಗ ಈ ಭಾಗ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಿದೆ.ಈ ಸಂಸ್ಥೆಯು ನೇರ ದಿಟ್ಟ ನಿರಂತರವಾಗಿ ಜನರ ಸೇವೆಯನ್ನು ಮಾಡಲಿ ಇನ್ನು ಹೆಚ್ಚಿನ ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ಶುರು ಮಾಡಿ ಜನರ ಕಷ್ಟಗಳಿಗೆ ಭಾಗಿಯಾಗಲಿ ಎಂದು ಶುಭ ಹಾರೈಸಿದರು.

ಗಣಕಯಂತ್ರ ಕೊಠಡಿಯನ್ನು ಉದ್ಘಾಟನೆ ಮಾಡಿದ ಮೊಹಮ್ಮದ್ ಹನೀಫ್ ಮದನಿ ಧರ್ಮಗುರುಗಳು ಎಂಜೆಎಂ ಕಾಯರ್ತಡ್ಕ ಇವರು ಮಾತನಾಡಿ ಪ್ರಿಯದರ್ಶಿನಿ ಸಂಸ್ಥೆಯು ವೇಗವಾಗಿ ಬೆಳೆಯುತ್ತಿದ್ದು ಇನ್ನೂ ಹೆಚ್ಚಿನ ಜನರಿಗೆ ಈ ಸಂಸ್ಥೆಯ ಸೇವೆಯು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಶರತ್ ಕೃಷ್ಣ ಪಡ್ವೆಟ್ನಾಯ, ಕೆ.ಹರೀಶ್ ಕುಮಾರ್, ರಮೇಶ್ ರಾವ್, ಫಾದರ್ ಜೋಸೆಫ್ ವಾಲುಕಾರನ್, ಮಹಮದ್ ಹನೀಫ್, ವಿಜಯ್ ಬಿ ಎಸ್, ಕೆ.ಭದ್ರಯ್ಯ ಗೌಡ, ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ಉಪಸ್ಥಿತರಿದ್ದರು.ರಶ್ಮಿತಾ, ಚೈತ್ರ, ಪವಿತ್ರ ಪ್ರಾರ್ಥನೆ ನೆರವೇರಿಸಿದರು.

ಸ್ವಾಗತ ಭಾಷಣವನ್ನು ಸಂಘದ ನಿರ್ದೇಶಕ ಕೆ.ರಾಮಚಂದ್ರ ಗೌಡ ನೆರವೇರಿಸಿದರು.ನಂತರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್ ಸಂಘದ ಬೆಳವಣಿಗೆಯನ್ನು ಜನರ ಮುಂದೆ ತಿಳಿಸಿದರು.ಸಂಘದ ನಿರ್ದೇಶಕ ಮೋಹನ್ ಶೆಟ್ಟಿಗಾರ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here