ಬೆಳ್ತಂಗಡಿ: ಎಸ್‌ವೈಎಸ್ 30 ನೇ ವರ್ಷಾಚರಣೆ ಪ್ರಯುಕ್ತ ಕಾರ್ಮಿಕರ ಸಂಗಮ ಹಾಗೂ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಕಾರ್ಮಿಕರ ಸಂಗಮ ಮತ್ತು ಡ್ರೈವರ್ಸ್ ಮೀಟ್ ಕಾರ್ಯಕ್ರಮವು ಉಜಿರೆಯ ಮಲ್ಜಅ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
200 ಕ್ಕೂ ಅಧಿಕ ಕಾರ್ಮಿಕರು ಹಾಗೂ ಡ್ರೈವರ್ಸ್ ಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಸದಸ್ಯರೂ ಜಿಲ್ಲಾ ಕಾರ್ಯದರ್ಶಿಯೂ ಆದ ಅಶ್ರಫ್ ಸಖಾಫಿ ಮಾಡಾವು ವಿಷಯ ಮಂಡಿಸಿದರು. ಅನುಗ್ರಹ ಸಮೂಹ ಸಂಸ್ಥೆ ಯ ವಕ್ತಾರ ತ್ವಲ್ಹತ್ ಎಂ.ಜಿ ಸವಣಾಲು ಕಾರ್ಮಿಕರಿಗೆ ಹಾಗೂ ಚಾಲಕರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಮಿಕರಿಗೆ ಸ್ಥಳದಲ್ಲಿಯೇ ಆರೋಗ್ಯ ಕಾರ್ಡ್ ಮಾಡಿ ವಿತರಿಸಲಾಯಿತು. ಎಸ್‌ವೈಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ವೈಎಸ್ ಉಜಿರೆ ಸರ್ಕಲ್ ಅಧ್ಯಕ್ಷ ಸಲೀಂ ಕನ್ಯಾಡಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಅಧ್ಯಕ್ಷ ಅಸ್ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ ಸರ್ಕಲ್, ಕಾರ್ಯದರ್ಶಿ ಖಾಲಿದ್ ಮಸ್ಲಿಯಾರ್, ಉಜಿರೆ ಸುನ್ನೀ ಮ್ಯಾನೇಜ್ಮೆಂಟ್ ಅಧ್ಯಕ್ಷ ಮುಹಿಯುದ್ದೀನ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು, ಉಜಿರೆ ಎಸ್‌ವೈಎಸ್ ಝೋನ್ ನಾಯಕ ಅಯ್ಯೂಬ್ ಮಹ್ಲರಿ ಕಾವಳಕಟ್ಟೆ, ಅಶ್ರಫ್ ಹಿಮಮಿ, ಪೈಝಲ್ ಬೆಳ್ತಂಗಡಿ ಅಬ್ದುಲ್ಲಾ ಉಜಿರೆ ಮೊದಲಾದವರು ಭಾಗವಹಿಸಿದ್ದರು.
ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಅಧ್ಯಕ್ಷ ಅನ್ಸಾರ್ ಸಅದಿ ಮಾಚಾರು ಸ್ವಾಗತಿಸಿ ವಂದಿಸಿದರು.