ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರು ಸರ್ಕಲ್ ಇದರ ವತಿಯಿಂದ ಆ.25 ರಂದು ಕಿಲ್ಲೂರು ಆಶಿಕ್ ಮನ್ಝಿಲ್ ನಲ್ಲಿ ಸವ೯ಧರ್ಮಿಯರ ಸೌಹಾದ೯ ಒಗ್ಗೂಡುವಿಕೆಯಲ್ಲಿ ಪ್ರಜಾಭಾರತ ಕಾರ್ಯಕ್ರಮ ನಡೆಯಿತು.
ಕಾಜೂರು ಸರ್ಕಲ್ ಅಧ್ಯಕ್ಷ ದಿಡುಪೆ ಮುಹಮ್ಮದ್ ಅಲ ಅಧ್ಯಕ್ಷತೆ ವಹಿಸಿದ್ದರು.
ಇಸ್ಮಾಯಿಲ್ ಫೈಝಿ ದುಆ ನಿರ್ವಹಿಸಿದರು.ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ತುಂಗಪ್ಪ ಪೂಜಾರಿ ಕಾಜೂರು, ವೀರಪ್ಪ ದೇವಾಡಿಗ ಬಂಗಾಡಿ ತಮ್ಮ ಬಾಲ್ಯ ಕಾಲದ ಸೌಹಾರ್ದದ ಬದುಕನ್ನು ಹಂಚಿಕೊಂಡರು.ಕಾಜೂರು ದರ್ಗಾ ಶರೀಫ್ ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಮುಖ್ಯ ಭಾಷಣ ಮಾಡಿ ಕೋಮು ಸೌಹಾರ್ದತೆಯ ಅನಿವಾರ್ಯತೆಯನ್ನು ತಿಳಿಸಿದರು.
ಕಾಜೂರು ದರ್ಗಾ ಶರೀಫಿನ ಪ್ರಧಾನ ಕಾರ್ಯದರ್ಶಿಯೂ, ಎಸ್‌ವೈಎಸ್ ಬೆಳ್ತಂಗಡಿ ಝೋನ್ ಕೋಶಾಧಿಕಾರಿಯೂ ಆದ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಝೋನ್ ಸದಸ್ಯ ಕೆ.ಪಿ ಮುಹಮ್ಮದ್, ಕಿಲ್ಲೂರು ಮಸೀದಿ ಉಸ್ತುವಾರಿ ಹಂಝತ್, ಕೆ ಮುಹಮ್ಮದ್ ಕಿಲ್ಲೂರು ಹಾಗೂ ಎರ್ಮಾಳ, ಕಿಲ್ಲೂರು, ಪೆರ್ದಾಡಿ, ಕಾಜೂರು ಯುನಿಟ್ ಮತ್ತು ಸರ್ಜಲ್ ಗಳ ಪ್ರಮುಖರು ಪಾಲ್ಗೊಂಡಿದ್ದರು.