

ಧರ್ಮಸ್ಥಳ: ಸೌಜನ್ಯ ಕೇಸ್ ಹಿನ್ನಲೆಯಾಗಿಟ್ಟುಕೊಂಡು ಹೋರಾಡುತ್ತಿರುವವರು ದುರುದ್ದೇಶವನ್ನು ಇಟ್ಟುಕೊಂಡು ಧರ್ಮಸ್ಥಳ ಕ್ಷೇತ್ರದ ಮೇಲೆ ಕಳಂಕ ಹಚ್ಚುವುದನ್ನು ನಾವು ಸರ್ವತಾ ಒಪ್ಪುವುದಿಲ್ಲ ಹಾಗೂ ತೀವ್ರವಾಗಿ ಖಂಡಿಸುತ್ತೇವೆಂದು ಧರ್ಮಸ್ಥಳದ ಗ್ರಾಮಸ್ಥರು ಆಗ್ರಹಿಸಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಸ್ಥರು”ಒಬ್ಬ ರೌಡೀಶೀಟರ್ ದೇವಸ್ಥಾನವನ್ನು ಜೆಸಿಬಿ ಮೂಲಕ ನಾಶಗೊಳಿಸಬೇಕೆಂಬ ಪ್ರಚೋದನಾಕಾರಿ ಹೇಳಿಕೆ ನೀಡುವುದು ನೀಡುವುದು ಮತ್ತು ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಕೈ ಮುಗಿಯುವುದು ವೇಸ್ಟ್ ಎಂಬಿತ್ಯಾದಿ ಅನೇಕ ಅವಹೇಳನಕಾರಿ ಮಾತುಗಳನ್ನಾಡುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕಷ್ಟೇ ಸೀಮಿತವಾಗಿದೆ.ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಪ್ರಾರ್ಥನೆ ಮೊದಲಾದ ನೆಪದಲ್ಲಿ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳು ಹಾಗೂ ಅವರಿಂದ ಪ್ರಭಾವಿತರಾದವರು ಸಹ ಬೇರೆ ಬೇರೆ ಸಂಘಟನೆಗಳ ಹೆಸರಿನ ಅಡಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಗುಂಪುಕಟ್ಟಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರವೇಶಿಸಿ ಅವರ ದುರುದ್ದೇಶಿತ ಕಾರ್ಯವನ್ನು ಕಾರ್ಯಗತಗೊಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಶಾಂತಿ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅವರ ಯಾವುದೇ ಪ್ರಯತ್ನವನ್ನು ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮಸ್ಥರು ಒಂದಾಗಿ ನಿರ್ಧರಿಸಿದ್ದೇವೆಂದು ತಿಳಿಸಿದರು.
ಸುದ್ದಿಗೋಷ್ಢಿಯಲ್ಲಿ, ಭಾಸ್ಕರ್ ಧರ್ಮಸ್ಥಳ, ಶಾಂಭವಿ ಆರ್ ರೈ, ಪ್ರಭಾಕರ ಪೂಜಾರಿ, ಸಂದೀಪ್ ರೈ, ವಿಠಲ್ ಶೆಟ್ಟಿ, ಶ್ರೀನಿವಾಸ ರಾವ್, ಛಾಯಾ ಮುಂತಾದವರು ಗ್ರಾಮಸ್ಥರ ಪರವಾಗಿ ಮಾತನಾಡಿದರು.