

ಕಾಯರ್ತಡ್ಕ: ಇಲ್ಲಿಯ ನೇತಾಜಿ ಆಟೋ ನಿಲ್ದಾಣ ದ ಬಳಿ ಇರುವ ಮಂಜುನಾಥಗೌಡ ಎಂಬುವರ ಭಾರತ್ ಸ್ಟೋರ್ಸ್ ಗೆ ಆ.22ರಂದು ತಡರಾತ್ರಿ ಕಳ್ಳರು ನುಗ್ಗಿ 15,000 ನಗದು ಸಿಗರೇಟ್ ಪ್ಯಾಕ್ ಗಳು ಹಾಗೂ ಅಂಗಡಿಯಲ್ಲಿದ್ದ ಇನ್ನಿತರ ವಸ್ತುಗಳನ್ನು ದೋಚಿ ಅಂಗಡಿಯ ಬೀಗ ಸಮೇತ ಪರಾರಿಯಾಗಿದ್ದಾರೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆಗಮಿಸಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ಆರಂಭಿಸಿದ್ದಾರೆ.
ಸ್ಥಳೀಯ ಅಂಗಡಿಯವರ ಮಾತು: ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ಪೊಲೀಸರಿಗೆ ಒತ್ತಾಯ ಮಾಡುತ್ತಿದ್ದೇವೆ ಇಂತಹ ಪ್ರಕರಣಗಳು ತಾಲೂಕಿನಲ್ಲಿ ಆಗಾಗ ಮರುಕಳಿಸುತ್ತಿದ್ದು ಕಳ್ಳರನ್ನು ಹಿಡಿದು ಸೂಕ್ತ ಶಿಕ್ಷೆ ನೀಡುವುದಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.